ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಧಾನಿ ಪೈಪ್ ಲೈನ್ ಕಾಮಗಾರಿ ಅವ್ಯವಸ್ಥೆ, ಮುಲ್ಕಿ ನ. ಪಂ ಮಾಸಿಕ ಸಭೆಯಲ್ಲಿ ಕ್ರಮಕ್ಕೆ ಒತ್ತಾಯ

ಮುಲ್ಕಿ: ಮುಲ್ಕಿ ನಗರಪಂಚಾಯತ್ ಮಾಸಿಕ ಸಭೆಯು ಅಧ್ಯಕ್ಷ ಸುಭಾಷ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ನಗರ ಪಂಚಾಯತ್ ಬಸ್ಸು ನಿಲ್ದಾಣದ, ಕೆಎಎಸ್ ರಾವ್ ನಗರದಲ್ಲಿ ಕಟ್ಟಡದಲ್ಲಿ ಅಂತಸ್ತು ನಿರ್ಮಿಸುವ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ಹಾಗೂ ಚರ್ಚೆ ನಡೆಯಿತು.

ಆಡಳಿತ ಪಕ್ಷದ ಶೈಲೇಶ್ ಕುಮಾರ್ ಮಾತನಾಡಿ ಕಟ್ಟಡದಲ್ಲಿ ಅಂತಸ್ತು ನಿರ್ಮಿಸುವ ಬಗ್ಗೆ ಸ್ಥಾಯಿ ಸಮಿತಿಯಲ್ಲಿ ನಿರ್ಣಯವಾಗಿದ್ದು ಸಭೆಯಲ್ಲಿ ಅನುಮೋದಿಸಬೇಕು ಎಂದರು. ಇದಕ್ಕೆ ವಿರೋಧ ಪಕ್ಷದ ನಾಯಕಿ ವಿಮಲಾ ಪೂಜಾರಿ ಹಾಗೂ ಸದಸ್ಯ ಪುತ್ತು ಬಾವ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಾಲ ಮಾಡಿ ಅಂತಸ್ತು ನಿರ್ಮಾಣ ಮಾಡುವುದರ ಮೊದಲು ವರದಿಯನ್ನು ಅಧ್ಯಯನ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ನ. ಪಂ. ಉಪಾಧ್ಯಕ್ಷ ಸತೀಶ್ ಅಂಚನ್, ಸ್ಥಾಯಿ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ನಡೆಯಿತು. ಆಗ ನಗರಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಗರ ಪಂಚಾಯತ್ ವ್ಯಾಪ್ತಿಯ ಬಸ್ಸು ನಿಲ್ದಾಣದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಅಧಾನಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ತಿಂಗಳಾದರೂ ಕಾಮಗಾರಿ ಪೂರ್ತಿಗೊಂಡಿಲ್ಲ. ಬಸ್ಸು ನಿಲ್ದಾಣ ಕೆಸರುಮಯ ವಾಗಿದ್ದು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸದಸ್ಯ ಬಾಲಚಂದ್ರ ಕಾಮತ್ ದೂರಿದರು.

ನಪಂ ವ್ಯಾಪ್ತಿಯ ಕೊಕ್ಕರಕಲ್ ಬಳಿ ಬಹುಮಹಡಿ ಕಟ್ಟಡದ ಕಾಮಗಾರಿಯಿಂದ ರಸ್ತೆ ಪೂರ ಹಾಳಾಗಿದ್ದು ರಸ್ತೆ ದುರಸ್ತಿ ಪಡಿಸಿದರೆ ಮಾತ್ರ ಡೋರ್ ನಂಬರ್ ನೀಡಬೇಕು ಎಂದು ಸದಸ್ಯ ಯೋಗೀಶ್ ಕೋಟ್ಯಾನ್ ಆಗ್ರಹಿಸಿದರು. ಅವರು ಮಾತನಾಡಿ ಕಳೆದ 40 ವರ್ಷಗಳಿಂದ ಇದ್ದ

ಚಿತ್ರಾಪು ಅಂಚೆ ಕಚೇರಿ ಮುಚ್ಚಲು ಸಿದ್ಧವಾಗಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ತುಂಬೆ ನೀರು ಹಳೆಯಂಗಡಿ ಗ್ರಾಪಂ ಬಾಕಿ ಸಂದಾಯವಾಗಿದೆಯೇ? ಎಂದು ಸದಸ್ಯ ಪುತ್ತುಬಾವ ಪ್ರಶ್ನಿಸಿದಾಗ ಕಳೆದ ತಿಂಗಳಲ್ಲಿ 2 ಲಕ್ಷ ಬಂದಿದೆ ಎಂಬ ಉತ್ತರ ಬಂತು.

ನ ಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬಪ್ಪನಾಡು ಜಂಕ್ಷನ್, ಮುಲ್ಕಿ ಬಸ್ ನಿಲ್ದಾಣ, ಬಿಲ್ಲವ ಸಂಘದ ಬಳಿ, ಕಾರ್ನಾಡು, ಕೆಎಸ್ ರಾವ್ ನಗರದ ಅಪಘಾತ ಹಾಗೂ ಅಪಾಯದ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕುರಿತು ಪೊಲೀಸರು ನಗರ ಪಂಚಾಯತಿಯ ಮನವಿ ಸಲ್ಲಿಸಿದ್ದಾರೆ ಎಂದು ಮುಖ್ಯಾಧಿಕಾರಿ ಚಂದ್ರಪೂಜಾರಿ ಸಭೆಯಲ್ಲಿ ತಿಳಿಸಿದರು.

ಈ ಬಗ್ಗೆ ದಾನಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Edited By : Nagesh Gaonkar
Kshetra Samachara

Kshetra Samachara

31/08/2021 06:38 pm

Cinque Terre

8.83 K

Cinque Terre

0

ಸಂಬಂಧಿತ ಸುದ್ದಿ