ಮುಲ್ಕಿ: ಮುಲ್ಕಿಯಲ್ಲಿ ಸುಸಜ್ಜಿತವಾಗಿ ಎಲ್ಲಾ ಸರಕಾರಿ ಕಛೇರಿಗಳು ಒಂದೇ ಸೂರಿನಡಿ ಬರುವಂತೆ ಮಿನಿ ವಿಧಾನಸೌಧ ತಲೆಯೆತ್ತಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಸುಮಾರು 34 ಲಕ್ಷ ರೂ ವೆಚ್ಚದಲ್ಲಿ ಆರ್ ಐ ಡಿ ಎಫ್ ಯೋಜನೆಯಡಿ ಮುಲ್ಕಿಯ ಕಾರ್ನಾಡು ಬಳಿ ನೂತನ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮುಲ್ಕಿಯಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಾಣವಾಗಲಿದ್ದು, 1 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಒಪಿಡಿ ಬ್ಲಾಕ್ ನೂತನ ಕಾಮಗಾರಿ ಲೋಕಾರ್ಪಣೆಗೊಳ್ಳಲಿದೆ. ಮುಲ್ಕಿಗೆ ಶೀಘ್ರದಲ್ಲಿ ತಾಲೂಕು ಪಂಚಾಯತ್ ಕಚೇರಿ ಹಾಗೂ ನಗರ ಪಂಚಾಯತ್ ಕಚೇರಿಯನ್ನು ನವೀಕರಣಗೊಳಿಸಲಾಗುವುದು ಎಂದರು.
ಸರ್ಕಾರಿ ಕಚೇರಿಯಲ್ಲಿ ಆಡಳಿತ ಸಿಬ್ಬಂದಿಗಳ ಕೊರತೆಯ ಬಗ್ಗೆ ಕಂದಾಯ ಸಚಿವರ ಬಳಿ ಮಾತನಾಡಿದ್ದು ಬಗೆಹರಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ ವಹಿಸಿದ್ದರು.
Kshetra Samachara
21/08/2021 03:09 pm