ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಸ್ತೆಕಾಮಗಾರಿಪೂರ್ಣಗೊಳಿಸುವಂತೆ ಆಗ್ರಹಿಸಿ ಪಂಚಾಯತ್ ಮುಂದೆ ಪ್ರತಿಭಟನೆ

ಉಡುಪಿ: ಮಣಿಪಾಲದ ಟ್ಯಾಪ್ಮಿಯಿಂದ ಅಂಗಡಿಬೆಟ್ಟು ನೆಲ್ಲಿಕಟ್ಟೆ ಮೂಲಕ ಕಾಜಾರಗುತ್ತು

ಸಂಪರ್ಕಿಸುವ ರಸ್ತೆಯ ಕಾಮಗಾರಿ ಸಂಪೂರ್ಣವಾಗದೇ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಈ ರಸ್ತೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಹಿರೇಬೆಟ್ಟು ಗ್ರಾ.ಪಂ ನ ಮುಂಭಾಗ ಸಾರ್ವಜನಿಕರು ಪ್ರತಿಭಟನೆ ನಡೆಸಿ ಪಿಡಿಓ ಗೆ ಮನವಿ ಪತ್ರ ನೀಡಿದರು

ಹಿರೇಬೆಟ್ಟು ಗ್ರಾ.ಪಂ ಕಾರ್ಯಲಯದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ. ತಾ.ಪಂ ಸದಸ್ಯರಾದ ಲಕ್ಷ್ಮೀನಾರಾಯಣ ಪ್ರಭು ,ಆಡಳಿತ ವ್ಯವಸ್ಥೆಯ ಲೋಪದಿಂದಾಗಿ ಈ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳದೇ ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಪಂಚಾಯತ್ ನ ಗಮನಕ್ಕೆ ತಂದಿದ್ದೇವೆ‌. ಅವರು ಸಂಬಂಧಪಟ್ಟ ಇಲಾಖೆಯೊಂದಿಗೆ ಸಂವಹನ ನಡೆಸಿ ಕಾಮಗಾರಿ ಪೂರ್ಣಗೊಳಿಸುವುದರ ಕುರಿತು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಪಂಚಾಯತ್ ನವರು ಮುತುವರ್ಜಿ ವಹಿಸದೇ ನಿರ್ಲಕ್ಷ್ಯ ತೋರಿದ್ದಾರೆ.

ಈ ರಸ್ತೆಯ ಮೂಲಕವೇ ಇಲ್ಲಿನ ನಿವಾಸಿಗಳು ಮಣಿಪಾಲ, ಉಡುಪಿಗೆ ತೆರಳಬೇಕಾಗಿದೆ. ಆದರೆ ಜೆ.ಸಿ.ಬಿಯಿಂದ ರಸ್ತೆಯನ್ನು ಅಗಲ ಮಾಡಿದ್ದು, ಮಳೆಯಿಂದ ರಸ್ತೆಗೆ ಹಾಕಿದ ಮಣ್ಣು ಕೊಚ್ಚಿ ಹೋಗಿ ನಡು ರಸ್ತೆಯಲ್ಲಿ ಹೊಂಡಗಳು ಸೃಷ್ಠಿಯಾಗಿವೆ.ಬೈಕ್ ಸವಾರರಿಗಂತೂ ಈ ರಸ್ತೆಯಲ್ಲಿ ಸಾಗುವುದು ದುಸ್ಸಾಹಸವಾಗಿದೆ ಎಂದು ಹೇಳಿದರು.

ಈ ಸಂದರ್ಭ ಮಾಜಿ.ತಾ.ಪಂ ಸದಸ್ಯರಾದ ಗುರುದಾಸ್ ಭಂಡಾರಿ, ವಸಂತ್ ಪೂಜಾರಿ, ಕೋಡಿಬೆಟ್ಟು ಗ್ರಾ.ಪಂ ಸದಸ್ಯರಾದ ಸಂತೋಷ್ ಶೆಟ್ಟಿ, ಹಿರೇಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷರಾದ ಸುರೇಶ್ ನಾಯ್ಕ್, ಪಂ ಸದಸ್ಯರಾದ ಯತೀಶ್ ಶೆಟ್ಟಿ, ಸುಮ ಪೂಜಾರಿ, ಮಾರಪ್ಪ ಮಡಿವಾಳ, ಕವಿತಾ, ಸತ್ಯಾನಂದ ನಾಯಕ್ ಅಂಜಾರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

20/08/2021 06:32 pm

Cinque Terre

8.38 K

Cinque Terre

0

ಸಂಬಂಧಿತ ಸುದ್ದಿ