ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಸ್ಥಗಿತಗೊಂಡ ವಿದ್ಯುತ್ ಇಲಾಖೆಯ ನೇಮಕಾತಿ ಪ್ರಕ್ರಿಯೆಗೆ ಮರುಚಾಲನೆ- ಇಂಧನ ಸಚಿವ ಸುನಿಲ್ ಕುಮಾರ್

ಬ್ರಹ್ಮಾವರ: ಒಂದೂವರೇ ವರ್ಷದ ಹಿಂದೆ ವಿದ್ಯುತ್ ಇಲಾಖೆಯ ಕೆಲವು ಹುದ್ದೆಗಳಿಗೆ ಸಿಬಂದಿಗಳನ್ನು ನೇಮಿಸಿಕೊಳ್ಳುವ ಸಲುವಾಗಿ ಆಯ್ಕೆ ಪಕ್ರಿಯೆಗಳನ್ನು ನಡೆಸಿ ಆದೇಶ ಪತ್ರವನ್ನು ನೀಡಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಇದು ಸ್ಥಗಿತಗೊಂಡು ಆಯ್ಕೆಯಾದವರಿಗೆ ನಿರಾಸೆಯಾಗಿತ್ತು. ಇದೀಗ ಈ ಪ್ರಕ್ರಿಯೆಗೆ ಮರುಚಾಲನೆ ನೀಡಲಾಗಿದ್ದು, ಈ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಬುಧವಾರ ವಿಶೇಷ ಸಭೆ ಕರೆಯಲಾಗಿದೆ. ಈಗಾಗಲೇ ಆದೇಶ ಪತ್ರ ಕೈ ಸೇರಿರುವ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಇಂಧನ ಇಲಾಖೆ ಸಚಿವ ಸುನಿಲ್ ಕುಮಾರ್ ತಿಳಿಸಿದರು.

ಅವರು ಸೋಮವಾರ ಕೋಟ ಕಾರಂತ ಕಲಾಭವನಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು.

ಫ್ರೀಪೇಯ್ಡ್ ಮೀಟರ್ ಅಳವಡಿಕೆ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ, 2023 ಡಿಸೆಂಬರ್ ನೊಳಗೆ ವಿದ್ಯುತ್ ಮೀಟರ್ ಗಳಿಗೆ ಫ್ರೀಪೇಯ್ಡ್ ತಂತ್ರಜ್ಞಾನ ಅಳವಡಿಸುವ ಯೋಜನೆ ಕೇಂದ್ರ ಸರಕಾರದಿಂದ ಪ್ರಸ್ತಾವನೆಯಲ್ಲಿದ್ದು ರಾಜ್ಯದಲ್ಲೂ ಇದನ್ನು ಇನ್ನಷ್ಟು ಸುಧಾರಣೆಗಳೊಂದಿಗೆ ಅಳವಡಿಸಿಕೊಳ್ಳುವ ಕುರಿತಾಗಿ ಚರ್ಚೆ ಚಾಲ್ತಿಯಲ್ಲಿದೆ ಎಂದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭ ಕುರಿತು ಕೇಳಿದ ಪ್ರಶ್ನೆಗೆ, ಕೋವಿಡ್ ಅರ್ಥಿಕ ಹಿನ್ನಡೆಯಿಂದಾಗಿ ತತ್‍ಕ್ಷಣ ಸರಕಾರ ಈ ಬಗ್ಗೆ ಕ್ರಮಕೈಗೊಳ್ಳುವ ಸ್ಥಿತಿಯಲಿಲ್ಲ. ಆದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ರೂಪುರೇಷೆ ಸಿದ್ಧಪಡಿಸುವ ಸಲುವಾಗಿ ಎಲ್ಲಾ ಶಾಸಕರನ್ನು ಒಟ್ಟುಗೂಡಿಸಿ ಶೀಘ್ರದಲ್ಲಿ ಚರ್ಚೆ ನಡೆಸಲಿದ್ದು ಆ ಸಂದರ್ಭ ಸಕ್ಕರೆ ಕಾರ್ಖಾನೆ ಬಗ್ಗೆ ಕೂಡ ಚರ್ಚೆ ನಡೆಸಲಿದ್ದೇವೆ ಎಂದರು.

ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವರ್ಷಪೂರ್ತಿ ವಿವಿಧ ಜಿಲ್ಲೆಗಳಲ್ಲಿ ಕಲೆ-ಸಂಸ್ಕೃತಿಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ ಎಂದು ಸಚಿವರು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

16/08/2021 08:06 pm

Cinque Terre

11.23 K

Cinque Terre

0

ಸಂಬಂಧಿತ ಸುದ್ದಿ