ಉಡುಪಿ : ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕಿನ 4 ಕುಟುಂಬಗಳಿಗೆ ಇಂದು ಚಾಂತಾರು ಗ್ರಾಮ ಪಂಚಾಯತ್ ನಲ್ಲಿ ರೂ. 2,04,072/- ಮೊತ್ತದ ಪರಿಹಾರ ಧನದ ಚೆಕ್ ನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು. ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಅಮೃತಾ ಆರ್. ಶೆಟ್ಟಿ ಅವರಿಗೆ ರೂ. 68,473/-, ಉಪ್ಪೂರು ಗ್ರಾಮದ ಸಂಜೀವ ಸೇರಿಗಾರ್ತಿ ಅವರಿಗೆ ರೂ. 95,100/-, ಮಟಪಾಡಿ ಗ್ರಾಮದ ಮಹಾಬಲ ನಾಯರಿ ಅವರಿಗೆ ರೂ. 20,500/-, 34ನೇ ಕುದಿ ಗ್ರಾಮದ ಕೃಷ್ಣಯ್ಯ ಶೆಟ್ಟಿ ಅವರಿಗೆ ರೂ. 20,000/- ಸೇರಿದಂತೆ ಒಟ್ಟು ರೂ. 2,04,072 ಮೊತ್ತದ ಚೆಕ್ ನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.
ಈ ಸಂದರ್ಭದಲ್ಲಿ ಉಪ್ಪೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಮಾಜಿ ಸದಸ್ಯರಾದ ನಾರಾಯಣ್ ಶೆಟ್ಟಿ ಹಾಗೂ ಬ್ರಹ್ಮಾವರ ತಹಶೀಲ್ದಾರರಾದ ರಾಜಶೇಖರ್, ಕಂದಾಯ ನಿರೀಕ್ಷಕರಾದ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು.
Kshetra Samachara
10/08/2021 04:00 pm