ಮೂಡುಬಿದಿರೆ: `ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕರ‍್ಪೊರೇಟ್ ಕಂಪೆನಿಗಳು ಭಾರತ ಬಿಟ್ಟು ತೊಲಗಿ' ಎನ್ನುವ ಧ್ಯೇಯದೊಂದಿಗೆ ದೇಶವ್ಯಾಪ್ತಿ ನಡೆಯುತ್ತಿರುವ ಪ್ರತಿಭಟನೆಗೆ ಪೂರಕವಾಗಿ ಮೂಡುಬಿದಿರೆಯ ತಹಸೀಲ್ದಾರ್ ಕಚೇರಿ ಎದುರು ಇಲ್ಲಿನ ಸಿಐಟಿಯು ಸಹಿತ ವಿವಿಧ ಸಂಘಟನೆಗಳಿಂದ ಸೋಮವಾರ ಪ್ರಚಾರಾಂದೋಲನ ನಡೆಯಿತು.
ರ‍್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ, ಕಾಪೋರೇಟ್ ಪರವಾದ ನೀತಿಯಿಂದಾಗಿ ದೇಶದಲ್ಲಿ ಬಡವ, ಮಧ್ಯಮ ವರ್ಗದವರ ಬದುಕು ಬೀದಿಪಾಲಾಗಿದೆ. ಖಾಸಗೀಕರಣದ ಕರಿಛಾಯೆ, ಪೆಟ್ರೋಲ್, ಡಿಸೇಲ್ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತ ವಿರೋಧಿ ಮಸೂದೆ, ತಿದ್ದುಪಡಿಗಳಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೇಂದ್ರ-ರಾಜ್ಯ ರ‍್ಕಾರಗಳು ರೈತರು, ಕಾರ್ಮಿಕರು, ಜನಸಾಮಾನ್ಯರಿಗೆ ಪ್ರಾಮಾಣಿಕವಾಗಿ ಸ್ಪಂದಿಸುವವರೆಗೆ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಲೇ ಇರುತ್ತದೆ ಎಂದು ಎಚ್ಚರಿಸಿದರು.
ಸಿಐಟಿಯು ಮೂಡುಬಿದಿರೆ ವಲಯ ಅಧ್ಯಕ್ಷೆ ರಮಣಿ, ಪ್ರಧಾನ ಕರ‍್ಯರ‍್ಶಿ ರಾಧಾ, ಕಟ್ಟಡ ಕಟ್ಟಡ ಕಾರ್ಯದರ್ಶಿ ಶಂಕರ್, ಸಿಐಟಿಯು ಪದಾಧಿಕಾರಿಗಳಾದ ಗಿರಿಜಾ, ಲಕ್ಷ್ಮೀ, ತಸ್ರೀಫ್, ರೈತ ಸಂಘ ಹಸಿರು ಸೇನೆ ಮೂಡುಬಿದಿರೆ ಅಧ್ಯಕ್ಷ ಲಿಯೋ ನಜ್ರರತ್, ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೋನಿ ಮೆಂಡೋನ್ಸಾ, ದಲಿತ ಸಂಘದ ಮುಖಂಡ ಕೃಷ್ಣಪ್ಪ ಕೊಣಾಜೆ, ಡಿವೈಎಫ್‌ಐ ಕಾರ್ಯದರ್ಶಿ ರಿಯಾಜ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
09/08/2021 02:58 pm