ಬ್ರಹ್ಮಾವರ: ಬಸವರಾಜ್ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಇಂದು ಹುಟ್ಟೂರಿಗೆ ಆಗಮಿಸಿದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಕೋಟದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಉಡುಪಿಯಲ್ಲಿ ಪಕ್ಷದ ವತಿಯಿಂದ ಅಭಿನಂದನೆ ಸ್ವೀಕರಿಸಿದ ಸಚಿವರು ನೇರವಾಗಿ ಸಾಲಿಗ್ರಾಮ ಆಂಜನೇಯ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿ, ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿದರು. ಅನಂತರ ಕೋಟಕ್ಕೆ ಆಗಮಿಸಿದಾಗ ಹಿರೇ ಮಹಾಲಿಂಗೇಶ್ವರ ದೇಗುಲದ ಬಳಿ ಅಭಿಮಾನಿಗಳು ವಾದ್ಯ ಘೋಷದೊಂದಿಗೆ ಬರಮಾಡಿಕೊಂಡು ಅಮೃತೇಶ್ವರೀ ದೇಗುಲದ ತನಕ ಕಾಲ್ನಡಿಗೆಯಲ್ಲಿ ಕರೆತಂದರು.
ಅಮೃತೇಶ್ವರೀ ದೇಗುಲದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಅನಂತರ ತನ್ನ ಮೂಲ ಮನೆಗೆ ತೆರಳಿ ತಾಯಿಯ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು..
Kshetra Samachara
06/08/2021 09:49 pm