ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ:ನೂತನ ಸಚಿವ ಕೋಟ ಬೆಂಗಲಿಗರಿಂದ ದೇವಸ್ಥಾನಕ್ಕೆ ಪಾದಯಾತ್ರೆ

ಕುಂದಾಪುರ: ಮೂರನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಅಭಿಮಾನಿಗಳು ಹಾಗೂ ಆಪ್ತರು ಇವತ್ತು ಕೋಟದಿಂದ ಮಾರಣಕಟ್ಟೆ ದೇವಸ್ಥಾನದ ತನಕ ಪಾದಯಾತ್ರೆ ಮಾಡಿದರು. ಕೋಟ ಶ್ರೀನಿವಾಸ ಪೂಜಾರಿಯವರ ಆಪ್ತ ಸಹಾಯಕರು ಸಹಿತ ಅಭಿಮಾನಿಗಳು ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದಿಂದ ಹೊರಟು ಮಾರಣಕಟ್ಟೆ ಶ್ರೀ‌ ಬ್ರಹ್ಮಲಿಂಗೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿ‌ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಶ್ರೀನಿವಾಸ ಪೂಜಾರಿಯವರು ಮತ್ತೊಮ್ಮೆ ಮಂತ್ರಿಯಾದರೆ ಅವರ ಊರಾದ ಕೋಟದಿಂದ ಮಾರಣಕಟ್ಟೆಗೆ ಕಾಲ್ನಡಿಗೆಯಲ್ಲಿ ತೆರಳುತ್ತೇವೆ ಎಂದು ಸಂಕಲ್ಪ ಮಾಡಿದ್ದರಂತೆ.ಅದರಂತೆ ಇವತ್ತು ಸಂಕಲ್ಪ ಈಡೇರಿಸಿದ್ದಾರೆ.

ಈ ಸಂದರ್ಭದಲ್ಲಿ ಕೋಟ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ, ರಂಜಿತ್ ಪೂಜಾರಿ ಮತ್ತು ಕೋಟ ಅಭಿಮಾನಿಗಳಾದ ಪ್ರಸಾದ್ ಬಿಲ್ಲವ,ಸುದಿನ ಕೋಡಿ, ರಾಮಕೃಷ್ಣ ಶೆಟ್ಟಿ ಗುಡ್ರಿ, ಸಂದೀಪ್ ಕೊಲ್ಲೂರು,ಶೇಖರ್ ಪೂಜಾರಿ ಗೋಳಿಹೊಳೆ,ಮಹೇಶ್ ಹಟ್ಟಿಕುದ್ರು,ಸಾಯಿಕುಮಾರ್, ನಾಗರಾಜ್ ಗೋಳಿಹೊಳೆ ,ಸೀತರಾಮ್,ಸೂರಜ್ ಶೆಟ್ಟಿ ,ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವರಾಮ್ ಕೃಷ್ಣ ಭಟ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/08/2021 07:01 pm

Cinque Terre

11.59 K

Cinque Terre

0

ಸಂಬಂಧಿತ ಸುದ್ದಿ