ಬೆಂಗಳೂರು : ಬೆಂಗಳೂರು ಜೆಡಿಎಸ್ ಮುಖ್ಯ ಕಾರ್ಯಾಲಯದ ಜೆಪಿ ಭವನದಲ್ಲಿ ರಾಜ್ಯ ಮುಖಂಡರೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳ ಸಭೆ ನಡೆಯಿತು. ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣಾ ಪೂರ್ವಭಾವಿ ತಯಾರಿಯ ಬಗ್ಗೆ ಹಾಗೂ ನೂತನ ಜಿಲ್ಲಾ ಪದಾಧಿಕಾರಿಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಯ್ತು.
ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಕುರಿತಾಗಿ ಹೈಕಮಾಂಡ್ ನಿಂದ ಸಂಪೂರ್ಣ ಬೆಂಬಲದ ಭರವಸೆ ಈ ಸಭೆಯಲ್ಲಿ ನೀಡಲಾಯ್ತು.
ಜೆಲ್ಲೆಗೆ ಹೊಸ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕವನ್ನು ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಬಿ.ಎಲ್. ಭೋಜೆ ಗೌಡರ ಜೊತೆ ಚರ್ಚಿಸಿ ಎಲ್ಲರಿಗೂ ಒಪ್ಪಿಯಾಗುವಂತಹ ವ್ಯಕ್ತಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಕೆ. ಕುಮಾರಸ್ವಾಮಿಯವರು ಸಭೆಯಲ್ಲಿ ತಿಳಿಸಿದರು. ಹಾಗೂ ಜಿಲ್ಲೆಯಲ್ಲಿ ಪಕ್ಷದ ಕುಂದುಕೊರತೆಗಳ ಬಗ್ಗೆ ಗಂಭೀರವಾದ ಚರ್ಚೆಯನ್ನು ಈ ವೇಳೆಯಲ್ಲಿ ನಡೆಸಲಾಯ್ತು.
ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ನಾಯಕರಾದ ಕುಮಾರಸ್ವಾಮಿ ಮಾತನಾಡಿ ಈ ಹಿಂದೆ ಹಲವು ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗೆ ಭೇಟಿ ಕೊಟ್ಟು ಪಕ್ಷ ಸಂಘಟನೆಗೆ ಪ್ರಯತ್ನಿಸಿದ್ದರೂ, ಜಿಲ್ಲೆಯ ಪದಾಧಿಕಾರಿಗಳು, ನಾಯಕರುಗಳು ನಾನು ಬರುವಾಗ ಮಾತ್ರ ಒಟ್ಟುಗೋಡುವುದಲ್ಲದೆ ಪಕ್ಷ ಅಭಿವೃದ್ಧಿಯ ಬಗ್ಗೆ ಸೂಕ್ತ ಕಾರ್ಯಕ್ರಮ ರೂಪಿಸಲಿಲ್ಲ ಮತ್ತು ಸಂಘಟನೆ ಮಾಡುವಲ್ಲಿ ವಿಫಲರಾಗಿದ್ದಾರೆಂದು ಖೇದವನ್ನು ವ್ಯಕ್ತಪಡಿಸಿದರು.
ಅವರು ಮಾತನಾಡಿ ಪಕ್ಷದ ಹೆಸರಿನಲ್ಲಿ, ಪಕ್ಷದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ನಡೆಸುವವರನ್ನು ಬೆಂಬಲಿಸಬೇಕೆ ವಿನ ಅವರ ಕಾಲೆಳೆಯುವ ಕೆಲಸ ಮಾಡಬಾರದೆಂದು ತಾಕೀತು ಮಾಡಿದರು.
ಸಭೆಯಲ್ಲಿ ಶಾಸಕರಾದ ಬಂಡೆಪ್ಪ ಕಾಶೆಂಪುರ್, ವೆಂಕಟರಾವ್ ನಾಡಗೌಡ, ಬಿ.ಎಂ. ಫಾರೂಕ್, ತಿಪ್ಪೇಸ್ವಾಮಿ, ಹಂಗಾಮಿ ಜಿಲ್ಲಾಧ್ಯಕ್ಷರಾದ ಮಹಮದ್ ಕುಂಞ,ರಾಜ್ಯ ಉಪಾಧ್ಯಕ್ಷರಾದ ಎಂ.ಬಿ ಸದಾಶಿವ ,ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮುಲ್ಕಿ ಮಾತನಾಡಿದರು. ಸಭೆಯಲ್ಲಿ ದ.ಕ. ಮಹಿಳಾ ಘಟಕಾಧ್ಯಕ್ಷೆ ಸುಮತಿ ಹೆಗ್ಡೆ, ರಾಜಶ್ರೀ ಹೆಗ್ಡೆ, ಅಕ್ಷಿತ್ ಸುವರ್ಣ, ದಿವಾಕರ್ ಶೆಟ್ಟಿ ತೋಡಾರ್, ದಿನಕರ್ ಉಲ್ಲಾಲ್, ಫೈಝಲ್ ಮಂಗಳೂರು, ಖಲೀಲ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/08/2021 07:39 am