ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಾಜಕೀಯಕ್ಕೆ ಬಂದ ಮೇಲೆ ಬೇಸರದ ನರ ಕಟ್ ಮಾಡಿಕೊಳ್ಳಬೇಕು! ಕೋಟಗೆ ರಘುಪತಿ ಭಟ್ ಸಲಹೆ

ಉಡುಪಿ: ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಆರು ಕೋಟಿಯ ಮನೆ ಕಟ್ಟಿಸುತ್ತಿದ್ದಾರೆ ಎಂಬ ಅಪಪ್ರಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್, ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ.

ಶಾಸಕ, ಮಂತ್ರಿಯಾದವರು ಮನೆ ಕಟ್ಟುವುದು ಅಪರಾಧವಲ್ಲ.

ಭ್ರಷ್ಟಾಚಾರ ಮತ್ತು ಅವ್ಯವಹಾರ ಮಾಡಿದರೆ ಅದು ಅಪರಾಧ. ಆ ಫೋಟೋ ನೋಡುವಾಗಲೇ ಗೊತ್ತಾಗುತ್ತದೆ, ಅದು 60 ಲಕ್ಷದ ಮನೆ ಎಂದು.ಮೂರು ಅವಧಿಗೆ ಕೋಟ ಶಾಸಕರಾಗಿ ಆಯ್ಕೆಯಾದವರು. ಶ್ರೀನಿವಾಸ ಪೂಜಾರಿ ಅವರಿಗೆ ಸಂಬಳ, ಹಲವಾರು ಭತ್ಯೆಗಳು ಬರುತ್ತವೆ. ಹೀಗಾಗಿ ಅಪಪ್ರಚಾರಗಳಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಹೇಳಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ ದೊಡ್ಡ ಬಂಗಲೆಯನ್ನು ಕಟ್ಟಿಸುತ್ತಿಲ್ಲ. ಬೇರೆ ನಾಯಕರ ತರಹ 50 ಕೋಟಿ ಮನೆ ಕಟ್ಟಲು ಹೊರಟಿಲ್ಲ.

ಶ್ರೀನಿವಾಸ ಪೂಜಾರಿಯವರೇ ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ, ರಾಜಕಾರಣದಲ್ಲಿ ಇಂತಹ ಅಪಪ್ರಚಾರ ಸಾಮಾನ್ಯ.

ಇಂತದ್ದನ್ನೆಲ್ಲಾ ನಮ್ಮ ಜನ ನಂಬುವುದಿಲ್ಲ. ನೀವು ನಿಮ್ಮ ಕೆಲಸವನ್ನು ಮಾಡಿಕೊಂಡು ಹೋಗಿ. ಮಂತ್ರಿ ಮಂಡಲ ವಿಸ್ತರಣೆ ಆಗುತ್ತಿರುವಾಗ ಇಂತಹದ್ದೆಲ್ಲ ಸಾಮಾನ್ಯ.ಪೂಜಾರಿಯವರ ವಿರೋಧಿಗಳು, ಕಾಂಗ್ರೆಸ್ ಪಕ್ಷದವರು ಫೋಟೋ- ಬರಹ ಬಿಟ್ಟಿರಬಹುದು.

ರಾಜಕೀಯಕ್ಕೆ ಬಂದ ಮೇಲೆ ಬೇಸರದ ನರ ಕಟ್ ಮಾಡಿಕೊಳ್ಳಬೇಕು ಎಂದು ಕೋಟ ಶ್ರೀನಿವಾಸ್ ಪೂಜಾರಿಗೆ ಉಡುಪಿ ಶಾಸಕ ರಘುಪತಿ ಭಟ್ ಬೆಂಬಲ ಸೂಚಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

31/07/2021 06:07 pm

Cinque Terre

13.84 K

Cinque Terre

5

ಸಂಬಂಧಿತ ಸುದ್ದಿ