ಕುಂದಾಪುರ:ಗೋಪಾಡಿ ಗ್ರಾಮ ಪಂಚಾಯತಿ ಪ್ರಥಮ ಅವಧಿಯ ಅಧ್ಯಕ್ಷರಾಗಿ ಸರೋಜ ಪೂಜಾರಿ, ಉಪಾಧ್ಯಕ್ಷರಾಗಿ ನಾಗೇಶ ಶೆಟ್ಟಿಗಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆಯ ಪ್ರಭಾಕರ ನೆಡೆಸಿಕೊಟ್ಟರು.
9 ಸದಸ್ಯ ಬಲ ಹೊಂದಿರುವ ಗೋಪಾಡಿ ಪಂಚಾಯತಿಯಲ್ಲಿ 9 ಬಿಜೆಪಿ ಬೆಂಬಲಿತರಿದ್ದಾರೆ. ಇಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಅ’ ಮೀಸಲಾಗಿತ್ತು. ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸರೋಜ ಪೂಜಾರಿ ಅವರು ಎರಡನೇ ಬಾರಿಗೆ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ತಾ.ಪಂ.ಸದಸ್ಯೆ ವೈಲೆಟ್ ಬೆರೆಟ್ಟೋ, ಪಕ್ಷದ ಮುಖಂಡರಾದ ಕಾಡೂರು ಸುರೇಶ ಶೆಟ್ಟಿ, ಸದಾನಂದ ಬಳ್ಕೂರು, ಸತೀಶ ಶೆಟ್ಟಿ ವಕ್ವಾಡಿ, ಹಾಗೂ ಪ್ರಭಾಕರ ಶೆಟ್ಟಿ, ಮಹಮ್ಮದ್ ಸಾಹೇಬ್, ರಾಧಾದಾಸ್, ಪುಂಡಲೀಕ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
19/02/2021 10:11 am