ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಸಾಸ್ತಾನ ಟೋಲ್ ಪ್ಲಾಝಾದಲ್ಲಿ ಸ್ಥಳೀಯರ ಸುಂಕ ನಿರಾಕರಣೆ ಟೋಲ್ ಗೇಟ್ ಗೆ ಮುತ್ತಿಗೆ

ಉಡುಪಿ : ಇಂದಿನಿಂದ ಫಾಸ್ಟ್ ಟ್ಯಾಗ್‌ ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯ ಸಾಸ್ತಾನ‌ ಟೋಲ್ ಗೇಟ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ಸ್ಥಳೀಯರಿಗೆ ಟೋಲ್ ವಿನಾಯಿತಿ‌ ನೀಡಬೇಕೆಂದು ಒತ್ತಾಯಿಸಿ ಬ್ರಹ್ಮಾವರ ತಾಲೂಕಿನ ನಾಗರಿಕರು, ಸ್ಥಳೀಯ ಸಂಘಟನೆ ಮುಖಂಡರು ರಸ್ತೆಗಿಳಿದು ಸಾಸ್ಥಾನದಲ್ಲಿರುವ ನವಯುಗ ಕಂಪೆನಿಯ ಟೋಲ್‌ ಗೆ ಮುತ್ತಿಗೆ ಹಾಕಿ‌ ಕಂಪೆನಿ ‌ವಿರುದ್ದ ಧಿಕ್ಕಾರ ಕೂಗಿ ಟೋಲ್‌ತಡೆ ನಡೆಸಲಾಯಿತು.

ಪೊಲೀಸರು, ನವಯುಗ ಕಂಪೆನಿ ಅಧಿಕಾರಿಗಳು ಎಷ್ಟೇ ಮನವಿ ಮಾಡಿದ್ರೂ ಒಪ್ಪದ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿದ‌ ಪ್ರತಿಭಟನಾ‌ನಿರತರು ಎಲ್ಲಾ ವಾಹನಗಳನ್ನ ಟೋಲ್ ನೀಡದೆ ತೆರಳಲು ಅನವು ಮಾಡಿದ್ರು. ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಲುಪಿದಾಗ ಪೊಲೀಸರು ಪ್ರತಿಭಟನಾ‌ ನಿರತರನ್ನ ಬಂಧಿಸಲು ಮುಂದಾದ್ರೂ.‌ ಬಂಧನಕ್ಕೆ ಸಾಧ್ಯವಾಗದಾಗ ಮತ್ತೊಮ್ಮೆ ಮನವಿ ಮಾಡಿದ್ರು‌‌ ಪೊಲೀಸರು. ಕೊನೆಗೆ ನಾಳೆ ಸಭೆ ನಡೆಸಿ ಮುಂದಿನ ಉಗ್ರ ಹೋರಾಟ‌ ನಡೆಸುವುದಾಗಿ ನಿರ್ಧರಿಸಿದ ಮುಖಂಡರು ಸಭೆಯವರೆಗೆ ಕರನಿರಾಕರಣೆ ನಡೆಸುವುದಾಗಿ ಸ್ಥಳೀಯರಿಗೆ ಕರೆ ನೀಡಲಾಯಿತು.

Edited By : Manjunath H D
Kshetra Samachara

Kshetra Samachara

16/02/2021 03:50 pm

Cinque Terre

12.66 K

Cinque Terre

0

ಸಂಬಂಧಿತ ಸುದ್ದಿ