ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಧಿಕಾರ ಇಲ್ಲದಿದ್ದರೂ ಜನಸೇವಕನಾಗಿಯೇ ಇರುತ್ತೇನೆ; ಮಾಜಿ ಸಚಿವ 'ಅಭಯ'

ಮುಲ್ಕಿ: ಮುಲ್ಕಿ ಸಮೀಪದ ಕೆ.ಎಸ್. ರಾವ್ ನಗರ ಲಿಂಗಪ್ಪಯ್ಯಕಾಡು ಶ್ರೀ ಶಿವಯೋಗೇಶ್ವರ ಮಂದಿರದಲ್ಲಿ ಶ್ರೀ ಮಹಾಗಣಪತಿ ಮತ್ತು ಶ್ರೀ ಸಾಂಬ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಹಾಗೂ ಕುಂಭಾಭಿಷೇಕ ಕೊಲಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ನೇತೃತ್ವದಲ್ಲಿ ನಡೆಯಿತು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಹಿಂಚಗೇರಿ ಬೃಹನ್ಮಠದ ಶ್ರೀ ಶಂಭುಲಿಂಗ ಶಿವಯೋಗಿ ಶಿವಾಚಾರ್ಯರು ಆಶೀರ್ವಚನ ನೀಡಿ, ಭಗವಂತನ ಆರಾಧನೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಮಂದಿರದ ಜೀರ್ಣೋದ್ಧಾರದಿಂದ ಸಾನಿಧ್ಯವೂ ವೃದ್ಧಿಯಾಗುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ ಎಂದರು.

ಧಾರವಾಡ ನಯಾನಗರ ಸಿದ್ಧ ಸುಕ್ಷೇತ್ರದ ಗುರು ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.‌ ಮಾಜಿ ಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಲಿಂಗಪ್ಪಯ್ಯಕಾಡಿನ ಉತ್ತರ ಕರ್ನಾಟಕದ ನಾಗರಿಕರ ಆಶೋತ್ತರಗಳನ್ನು ಜನಸೇವಕನಾಗಿ ಈಡೇರಿಸಿದ್ದು, ಅಧಿಕಾರ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಜನಸೇವಕನಾಗಿಯೇ ಇರುತ್ತೇನೆ ಎಂದರು.

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ನ.ಪಂ. ಸದಸ್ಯ ಮಂಜುನಾಥ ಕಂಬಾರ, ಸಂದೀಪ್ ಕುಮಾರ್, ಮುನ್ನ ಯಾನೆ ಮಹೇಶ, ಉದ್ಯಮಿ ಜೀವನ ಶೆಟ್ಟಿ ಕಾರ್ನಾಡ್, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಶಿವಯೋಗೇಶ್ವರ ಮಂದಿರ ಅಧ್ಯಕ್ಷ ಗೊಳಾಲಪ್ಪ ತಮಗೊಂಡ ಮತ್ತಿತರರು ಉಪಸ್ಥಿತರಿದ್ದರು.

ಮಲ್ಲಣ್ಣ ಗೌಡ ನಿರೂಪಿಸಿದರು. ಶಾಸಕ ಉಮಾನಾಥ ಕೋಟ್ಯಾನ್, ಮುಲ್ಕಿ ನ.ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ನ.ಪಂ. ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಂದಿರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

Edited By : Manjunath H D
Kshetra Samachara

Kshetra Samachara

16/02/2021 01:10 pm

Cinque Terre

6.56 K

Cinque Terre

0

ಸಂಬಂಧಿತ ಸುದ್ದಿ