ಉಡುಪಿ: ಅಸಮಾಧಾನಗೊಂಡ ಶಾಸಕ ರೇಣುಕಾಚಾರ್ಯ ದೆಹಲಿ ಪ್ರವಾಸ ವಿಚಾರವಾಗಿ ಸಂಸದ ಬಿವೈ ರಾಘವೇಂದ್ರ ಹೇಳಿಕೆ ನೀಡಿದ್ದಾರೆ.
ರೇಣುಕಾಚಾರ್ಯ ಅವರು ಸಹಜವಾಗಿಯೇ ತಮ್ಮ ನೋವನ್ನು ಬೇರೆಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಮನುಷ್ಯ ಅಂದ ಮೇಲೆ ನೋವು ಇರೋದು ಸಹಜ.
ಒಬ್ಬೊಬ್ವರಿಗೂ ಅವರದೇ ವೈಯಕ್ತಿಕ ವಿಚಾರ ಬೇರೆ ಬೇರೆ ಇರುತ್ತದೆ.ಒಂದು ಚೌಕಟ್ಟಿನಲ್ಲಿ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶ ಇದೆ.ಒಂದೆರಡು ದಿನ ನೋವನ್ನು ಹೊರಹಾಕುತ್ತಾರೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ರೇಣುಕಾಚಾರ್ಯ ಅಸಮಾಧಾನ ಕುರಿತ ಪ್ರಶ್ನೆಗೆ ಸಿಎಂ ಪುತ್ರ ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
19/01/2021 09:40 pm