ಉಡುಪಿ: ಉಡುಪಿಯ ಆದಿ ಉಡುಪಿ ಸಿಎಂ ಯಡಿಯೂರಪ್ಪ ಆಗಮಿಸಿದ್ದಾರೆ.
ಎರಡು ದಿನ ಉಡುಪಿ ಪ್ರವಾಸದಲ್ಲಿ ಸಿಎಂ ಇರಲಿದ್ದಾರೆ.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ಧಟತನ ಮಾತನಾಡಿದ್ದಾರೆ. ಅವರ ಮಾತು ಒಕ್ಕೂಟ ವ್ಯವಸ್ಥೆಯ ವಿರುದ್ಧ ಇದೆ. ಮತ್ತೆ ಮತ್ತೆ ಈ ರೀತಿ ಮಾತನಾಡೋದು ಸರಿಯಲ್ಲ.
ಕರ್ನಾಟಕದಲ್ಲಿ ಸೌಹಾರ್ದದ ವಾತಾವರಣ ಇದೆ. ಇದು ಶೋಭೆ ತರುವ ಹೇಳಿಕೆ ಅಲ್ಲ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಕರ್ನಾಟಕದಿಂದದ ಒಂದಿಂಚೂ ಭೂಮಿ ಕೊಡುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಅಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
18/01/2021 04:57 pm