ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಸಂಸ್ಥೆ ಪಾರದರ್ಶಕವಾಗಿದೆ : ಅನಿಲ್ ಸಾಲ್ಯಾನ್

ಮುಲ್ಕಿ: ಕಳೆದ 65 ವರ್ಷಗಳಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ ಹಲವಾರು ಕುಟುಂಬಕ್ಕೆ ಆಧಾರವಾಗಿರುವ ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಕಂಪೆನಿಯು ಪಾರದರ್ಶಕವಾಗಿದ್ದು ಅದರ ವಿರುದ್ಧ ಮಾಡಿರುವ ಆರೋಪ ನಿರಾಧಾರವಾಗಿದೆ. ಯಾವುದೇ ಆಧಾರವಿಲ್ಲದೇ, ಅಧಿಕೃತ ದಾಖಲೆಗಳಿಲ್ಲದೇ, ಬೆರಳೆಣಿಕೆಯ ಮಂದಿಯಿಂದ ಸಂಸ್ಥೆಯ ಬಗ್ಗೆ ಅಪ ಪ್ರಚಾರ ನಡೆಸುತ್ತಿರುವುದು ಖಂಡನೀಯವಾಗಿದೆ ಎಂದು ಸಸಿಹಿತ್ಲುವಿನ ಸಾಮಾಜಿಕ ನೇತಾರ ಅನಿಲ್ ಸಾಲ್ಯಾನ್ ಮುಂಬೈ ಹೇಳಿದರು.

ಅವರು ಸುರತ್ಕಲ್‌ನ ಸೂರಜ್ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಕಂಪೆನಿಯ ಫಲಾನುಭವಿಗಳು ಹಾಗೂ ಅದರ ಸುತ್ತಮುತ್ತ ಇರುವ 60ರಿಂದ 80 ಮಂದಿ ನಾಗರಿಕರಾದ ನಾವು ಈ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತಿದ್ದೇವೆ. ಇದು ಯಾವುದೇ ರೀತಿಯಲ್ಲೂ ಕಂಪೆನಿಯ ಪರವಾಗಿ ವಾದವಲ್ಲ, ಬದಲಾಗಿ ವಾಸ್ತವ ಸ್ಥಿತಿಯಲ್ಲಿ ಸಂಸ್ಥೆಯು ನಡೆಸುತ್ತಿರುವ ಕಾರ್ಯವೈಖರಿಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವಾಗಿದೆ ಎಂದರು.

ಮಿತ್ರಪಟ್ಣದ ಮೀನುಗಾರರ ನೇತಾರ ವಸಂತ ಸುವರ್ಣ ಅವರು ಮಾತನಾಡಿ, ದೂರುದಾರರು ಆರೋಪಿಸಿದಂತೆ ಕಂಪೆನಿಯು ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆದರೆ ಸಂಸ್ಥೆಯಲ್ಲಿ ಪ್ರತೀ ತಿಂಗಳು ಪರಿಸರ ತಜ್ಞರು, ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಹಾಗೂ ನಮ್ಮ ಸುತ್ತಮುತ್ತ ಇರುವ ಜನರ ಅಭಿಪ್ರಾಯವನ್ನು ಮುಕ್ತವಾಗಿ ಸಂಗ್ರಹಿಸುತ್ತಿದ್ದಾರೆ. ಮೀನು ಸಂಸ್ಕರಣ ಘಟಕ ಎಂದರೇ ಸ್ವಲ್ಪ ವಾಸನೆ ಬರುವುದು ಸಹಜ ಆದರೆ ಅದು ಕೆಟ್ಟ ವಾಸನೆ, ಆರೋಗ್ಯಕ್ಕೆ ಅಪಾಯಕಾರಿ ಎಂಬುದು ಸತ್ಯಕ್ಕೆ ದೂರವಾಗಿದೆ. ನಮಗೆ ಮಾಹಿತಿ ತಿಳಿದಂತೆ ಸಂಸ್ಥೆಯು ಎಲ್ಲಾ ತಾಂತ್ರಿಕ ವ್ಯವಸ್ಥೆಯನ್ನು ಮಾಡಿಕೊಂಡಿದೆ, ಪರಿಸರ ಇಲಾಖೆಯ ಸೂಚನೆಗಳನ್ನು ಆಗಾಗ ಪಾಲಿಸುತ್ತಿದೆ ಈ ಬಗ್ಗೆ ಯಾರೂ ಬೇಕಾದರೂ ಭೇಟಿ ನೀಡಿ ಪರಿಶೀಲನೆ ನಡೆಸಬಹುದು ಎಂದು ಕಂಪೆನಿಯ ಮಾಲೀಕರೇ ಹೇಳಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ನಿವಾಸಿ ವಿಠಲ ಶ್ರೀಯಾನ್ ಮಾತನಾಡಿ, ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಕಂಪೆನಿಯು ಕೇವಲ ಕೈಗಾರಿಕಾ ಸ್ಥಾಪನೆಗೆ ಆಸಕ್ತಿ ಹೊಂದಿರುವುದಿಲ್ಲ ಕೈಗಾರಿಕೆಯೊಂದಿಗೆ, ಸ್ಥಳೀಯ ಜನರ ಪರವಾಗಿ ಹಲವಾರು ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ, ಸಂಸ್ಥೆಯಲ್ಲಿರುವ ಸುಮಾರು ೨೦೦ ಮಂದಿ ಕೆಲಸಗಾರರಲ್ಲಿ ಶೇ.೮೦ ಮಂದಿ ಸ್ಥಳೀಯರೇ ಆಗಿದ್ದಾರೆ. ಅವರಿಗೆ ಕಾರ್ಮಿಕ ಇಲಾಖೆಯ ಕಾಯ್ದೆಯಂತೆಯೇ ಉದ್ಯೋಗ ನೀಡಲಾಗಿದೆ. ಕಂಪೆನಿಗೆ ಸ್ಥಳೀಯ ೧೦೦ಕ್ಕೂ ಮಿಕ್ಕಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಹಿಡಿದ ಮೀನನ್ನು ನೇರವಾಗಿ ಮಾರುಕಟ್ಟೆಯ ಬೆಲೆಯಲ್ಲಿ ಖರೀದಿಸಿ ಪ್ರೋತ್ಸಾಹಿಸುತ್ತಿದೆ. ಇದರೊಂದಿಗೆ ಸ್ಥಳೀಯ ಎಲ್ಲಾ ಸೇವಾ ಸಂಸ್ಥೆಗಳ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕಾರ್ಯಕ್ರಮಕ್ಕೆ ಮುಕ್ತ ನೆರವನ್ನು ನೀಡುತ್ತಿದೆ. ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ನೀಡುತ್ತಿದೆ. ಬಡ ಹೆಣ್ಣು ಮಕ್ಕಳ ಮದುವೆಗೆ, ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣಕ್ಕೆ ವಿಶೇಷ ನಿಧಿಯನ್ನು ನೀಡುತ್ತಿದೆ. ಇಂತಹ ಜನಪರ ಸಂಸ್ಥೆಯ ಬಗ್ಗೆ ಅಪ ಪ್ರಚಾರ ಮಾಡುವುದನ್ನು ಕೂಡಲೆ ನಿಲ್ಲಿಸಬೇಕು ಎಂಬುದು ಸಭ್ಯ ನಾಗರಿಕರಾದ ನಮ್ಮೆಲ್ಲರ ಆಗ್ರಹವಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಕಂಪೆನಿಯ ಬಗ್ಗೆ ಪ್ರಬಂಧಕ ಜಗನ್ನಾಥ ಕೋಟ್ಯಾನ್ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ,

ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಕಂಪೆನಿಯನ್ನು ಇತರ ಕಂಪೆನಿಗಳೊಂದಿಗೆ ಹೋಲಿಸದೇ, ಇದರ ಪೂರ್ವ ಪರ ತಿಳಿಯದೇ ಅಪ ಪ್ರಚಾರ ನಡೆಸಬಾರದು ಮುಂದೆ ಇದು ಮುಂದುವರಿದಲ್ಲಿ ಕಾನೂನು ಕ್ರಮವನ್ನು ಸ್ಥಳೀಯರ ಅಭಿಪ್ರಾಯದಂತೆ ಪಡೆಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಲು ಬಯಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಿಶೋರ್ ಮುಕ್ಕ, ವಿನೋದ್‌ಕುಮಾರ್, ಪ್ರೇಮ್‌ನಾಥ್ ಸಾಲ್ಯಾನ್, ಸುಮನ್, ಪ್ರಶಾಂತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

16/01/2021 10:40 pm

Cinque Terre

10.09 K

Cinque Terre

2

ಸಂಬಂಧಿತ ಸುದ್ದಿ