ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: "ಹೆಂಗೆಂಗೆ ಮಂತ್ರಿಗಳಿಗೆ 'ಟೋಪಿ' ಹಾಕಬೇಕೆಂದು ದಕ್ಷಿಣ ಕನ್ನಡದ ಬಿಜೆಪಿ ಶಾಸಕರಿಗೆ ಗೊತ್ತು"

ಬಂಟ್ವಾಳ: ನಳಿನ್ ಕುಮಾರ್ ಕಟೀಲ್ ಹಾಗೂ ಸಂತೋಷ್ ಅವರ ತರಬೇತಿಯಿಂದ ಹೆಂಗೆಂಗೆ ಮಂತ್ರಿಗಳಿಗೆ 'ಟೋಪಿ' ಹಾಕಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರಿಗೆ ಗೊತ್ತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮಾಷೆಯ ಧಾಟಿಯಲ್ಲಿ ಹೇಳಿದರು.

ಬಂಟ್ವಾಳದಲ್ಲಿ ನಡೆದ ಬಿಜೆಪಿ ಜನಸೇವಕ ಸಮಾವೇಶದಲ್ಲಿ ತಮ್ಮ ಭಾಷಣದ ಮಧ್ಯೆ ಈ ಅಂಶವನ್ನು ಕಿರುನಗೆ ಬೀರಿ ಉಲ್ಲೇಖಿಸಿದ ಅವರು,

"ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಎಲ್ಲ ಮಂತ್ರಿಗಳಿಂದ ಸಖತ್ ದುಡ್ಡನ್ನು ತೆಗೆದುಕೊಂಡು ಬಂದಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ರೂ ಹೇಳ್ಕೊಂಡು ಬರುತ್ತಿದ್ದಾರೆ... ಎಲ್ಲವೂ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿದೆ ಅಂತ" ಎಂದು ಹಾಸ್ಯ ಮಿಶ್ರಿತವಾಗಿ ಹೇಳಿದರು. ಈ ಸಂದರ್ಭ ಸಮಾವೇಶ ಸ್ಥಳದಲ್ಲಿ ನಗುವಿನಲೆಯೇ ಹರಿಯಿತು.

Edited By : Nagesh Gaonkar
Kshetra Samachara

Kshetra Samachara

12/01/2021 08:14 am

Cinque Terre

19.09 K

Cinque Terre

3

ಸಂಬಂಧಿತ ಸುದ್ದಿ