ಮಂಗಳೂರು: ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಕಂಡ ಹಿಂದೆಯೇ ತಾಪಂ ಹಾಗೂ ಜಿಪಂ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾದ್ಯಂತ ಜನಸೇವಕ ಸಮಾವೇಶ ರಾಜ್ಯದ ಆಯ್ದ ಕ್ಷೇತ್ರಗಳಲ್ಲಿ ಜ.11-13 ರ ವರೆಗೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.
ಈ ಜನಸೇವಕ ಸಮಾವೇಶಕ್ಕೆ ರಾಜ್ಯ ಹಾಗೂ ಕೇಂದ್ರದ ನಾಯಕರ ಒಟ್ಟು ಐದು ತಂಡಗಳು ಪ್ರವಾಸ ಕೈಗೊಳ್ಳಲಿದೆ. ಪ್ರಧಾನಿ ಮೋದಿಯವರು ತನ್ನನ್ನು ದೇಶದ ಪ್ರಧಾನ ಸೇವಕ ಎಂದು ಕರೆದಿದ್ದು, ಇದೇ ಕಲ್ಪನೆ ಆಧರಿಸಿ ಗ್ರಾಮ ಮಟ್ಟದಲ್ಲಿ ಸೇವಕರಾಗಿ ಕೆಲಸ ಮಾಡುವ ಕಲ್ಪನೆಯನ್ನು ಜನಸೇವಕ ಸಮಾವೇಶ ಎಂದು ಹೆಸರಿಸಲಾಗಿದೆ. ಮೈಸೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಈ ಜನಸೇವಕ ಸಮಾವೇಶ ಜ.11ರಂದು ಮಡಿಕೇರಿಯಲ್ಲಿ ಬೆಳಗ್ಗೆ 11ಗಂಟೆಗೆ, ಮಧ್ಯಾಹ್ನ 3ಗಂಟೆಗೆ ಬಂಟ್ವಾಳದಲ್ಲಿ, ಜ.12ರಂದು ಬೆಳಗ್ಗೆ 11 ಗಂಟೆಗೆ ಉಡುಪಿಯಲ್ಲಿ, ಮಧ್ಯಾಹ್ನ 3ಗಂಟೆಗೆ ಉತ್ತರ ಕನ್ನಡದಲ್ಲಿ, ಜ.13ರಂದು ಬೆಳಗ್ಗೆ 11ಗಂಟೆಗೆ, ಮಧ್ಯಾಹ್ನ 3ಕ್ಕೆ ಚಿಕ್ಕಮಗಳೂರಿನಲ್ಲಿ ನಡೆಯಲಿದೆ ಎಂದು ಕ್ಯಾ.ಗಣೇಶ್ ಕಾರ್ಣಿಕ್ ಮಾಹಿತಿ ನೀಡಿದರು.
Kshetra Samachara
09/01/2021 05:01 pm