ಇಂದು ಮಂಗಳೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರತಿನಿಧಿ ಸಂಕಲ್ಪ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮಾತನಾಡಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುವುದು.
150 ಕ್ಷೇತ್ರಗಳಲ್ಲಿ ನಾನು ಪ್ರವಾಸ ಮಾಡಲಿದ್ದೇನೆ, ಪ್ರತಿ ಕ್ಷೇತ್ರವನ್ನು ನಾವು ಬಲಪಡಿಸಬೇಕಾಗಿದೆ.
ಪ್ರಾಜೆಕ್ಟ್ ಪ್ರಜಾ ಪ್ರತಿನಿಧಿ ಮೂಲಕ ಬೂತ್ ಮಟ್ಟದಲ್ಲಿ ಸಮೀಕ್ಷೆ ಬಿಜೆಪಿಯ ಪ್ರತಿ ಕಾರ್ಯವನ್ನು ನಾವು ಗಮನಿಸಿದ್ದೇವೆ.
ನಮಗೆ ಪಕ್ಷ ಸಂಘಟನೆ ಈಗ ಬಹಳ ಮುಖ್ಯ ಬೂತ್ ಮಟ್ಟದಲ್ಲಿ ನಾವು ನಾಯಕರನ್ನು ತಯಾರು ಮಾಡಬೇಕು ಎಲ್ಲಾ ವರ್ಗದವರನ್ನು ಸೇರಿಸಬೇಕು ಹೊಸ ನಾಯಕರನ್ನು ನಾವು ತಯಾರು ಮಾಡಬೇಕು ಹಾಗಾಗಿ ನಿಮ್ಮ ಧ್ವನಿ ನನ್ನ ಧ್ವನಿಯಾಗಬೇಕು ನಾವು ಕಾಯದೇ ಪಕ್ಷ ಸಂಘಟನೆಗೆ ಕಾರ್ಯಪ್ರವೃತ್ತರಾಗಬೇಕು ಈ ವರ್ಷ ನಮ್ಮದು ಹೋರಾಟದ ವರ್ಷ ಎಂದಿದ್ದಾರೆ.
Kshetra Samachara
06/01/2021 12:41 pm