ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಕರ್ನಾಟಕ ಕರಾವಳಿಗೆ ಸೀ ಆಂಬ್ಯುಲೆನ್ಸ್, ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಶೀಘ್ರ ಒದಗಿಸಿ"

ಉಡುಪಿ: ಮೀನುಗಾರಿಕೆಯಲ್ಲಿ ಅತ್ಯಾಧುನಿಕ ಸಂವಹನ ತಂತ್ರಜ್ಞಾನ ಅಳವಡಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ಕರಾವಳಿ ಮೀನುಗಾರರು ಮನವಿ ಮಾಡಿದ್ದಾರೆ.

ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಉತ್ತರ ಕನ್ನಡ ಮತ್ತು ಮಲ್ಪೆಯ ಮೀನುಗಾರ ಮುಖಂಡರು, ಕರ್ನಾಟಕ ಮೀನುಗಾರಿಕೆ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಅವಶ್ಯಕತೆ ಈಗ ತುಂಬ ಜಾಸ್ತಿ ಇದೆ. ಮೀನುಗಾರರು ಬೇರೆ ರಾಜ್ಯಗಳಿಗೂ ಹೋಗಿ ಮೀನುಗಾರಿಕೆ ಮಾಡುತ್ತಾರೆ.

ಈ ಸಂದರ್ಭ ಬೋಟ್ ಗಳಿಗೆ ಅಥವಾ ಮೀನುಗಾರರಿಗೆ ಸಮುದ್ರದಲ್ಲಿ ಅಪಾಯವಾಗುವ ಸಾಧ್ಯತೆ ಇದ್ದೇ ಇದೆ. ತುರ್ತು ವೇಳೆ ಬೋಟ್ ಮತ್ತು ಮೀನುಗಾರರ ರಕ್ಷಣೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಬೇಕಾಗಿದೆ.

ಬೋಟ್ ಗಳಿಗೆ ಉಪಗ್ರಹ ಆಧರಿತ ನೇವಿಗೇಷನ್ ವ್ಯವಸ್ಥೆ ಅಳವಡಿಸುವುದರಿಂದ ಸಮಯಕ್ಕೆ ಸರಿಯಾಗಿ ಮೀನುಗಾರರಿಗೆ ಸುರಕ್ಷತಾ ಎಚ್ಚರಿಕೆ ಸಂದೇಶ ರವಾನಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಸಮುದ್ರದಲ್ಲಿರುವಾಗ ಉತ್ತಮ‌ ಮೀನು ಸಿಗಬಹುದಾದ ಮುನ್ಸೂಚನೆಯನ್ನೂ ನೀಡುತ್ತದೆ.

ಮೀನುಗಾರರ ಜೀವನ‌, ಕಸುಬಿಗೆ ಬಂದೊದಗುವ ದೊಡ್ಡ ಅಪಾಯ ಮತ್ತು ಸಂಕಷ್ಟದ ಪರಿಸ್ಥಿತಿ ಪರಿಹರಿಸಲು ಇಂತಹ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸರ್ಕಾರದ ಶೀಘ್ರ ಸಹಾಯದ ಅಗತ್ಯವಿದೆ ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.

ಮುಖ್ಯವಾಗಿ ಸೀ ಆಂಬ್ಯುಲೆನ್ಸ್ ಕರ್ನಾಟಕದಲ್ಲಿಲ್ಲ. ಇದನ್ನು ಕೇಂದ್ರ ಸರಕಾರ ತಕ್ಷಣ ಒದಗಿಸಬೇಕು ಎಂದು ಮುಖಂಡರಾದ ರವಿರಾಜ್ ಮಲ್ಪೆ,ಗಣಪತಿ‌ ಮಾಂಗ್ರೆ ಮತ್ತಿತರರು ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

07/10/2020 05:46 pm

Cinque Terre

11.08 K

Cinque Terre

0

ಸಂಬಂಧಿತ ಸುದ್ದಿ