ಕಾಪು: ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ ವೃದ್ಧಿ ಮತ್ತು ಹಿಂದೂ ಕಾರ್ಯಕರ್ತರ ಶ್ರೇಯೋಭಿವೃದ್ಧಿಗಾಗಿ ಟೀಮ್ ಮೋದಿ ಕಾಪು ವಲಯದ ವತಿಯಿಂದ ಇಲ್ಲಿನ ಮಡುಂಬು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅತಿ ಮಹಾರುದ್ರಯಾಗ ಸಂಪನ್ನಗೊಂಡಿತು.
ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಅರ್ಚಕ ವೇ| ಮೂ| ಜನಾರ್ದನ ತಂತ್ರಿ ಅವರ ಮಾರ್ಗದರ್ಶನದಲ್ಲಿ ವೇ| ಮೂ| ಪೆರ್ಣಂಕಿಲ ಶ್ರೀಶ ಭಟ್, ವೇ| ಮೂ| ಶ್ರೀವತ್ಸ ಭಟ್ ಪಾವಂಜೆ ಅವರ ನೇತೃತ್ವದಲ್ಲಿ ೧೦ ಮಂದಿ ಋತ್ವಿಜರ ಸಹಕಾರದೊಂದಿಗೆ ಎಳ್ಳು, ಸಕ್ಕರೆ ಮತ್ತು ಜೇನು ತುಪ್ಪದಿಂದ ಮಿಶ್ರಿತ ದ್ರವ್ಯವನ್ನು ಸಿದ್ಧಪಡಿಸಿ ೧೦೦೦ ಸಂಖ್ಯೆಯಲ್ಲಿ ಯಾಗಕ್ಕೆ ಆಹುತಿ ನೀಡಿ, ವಿವಿಧ ಅರ್ಘ್ಯಗಳನ್ನು ಸಮರ್ಪಿಸಲಾಯಿತು.ಕೊನೆಗೆ ಪೂರ್ಣಾಹುತಿ ನೀಡುವುದರೊಂದಿಗೆ ಅತಿ ಮಹಾರುದ್ರಯಾಗವನ್ನು ಪೂರ್ಣಗೊಳಿಸಲಾಯಿತು.ಇದೇವೇಳೆ ಪುರೋಹಿತರು ಮತ್ತು ಭಕ್ತಾದಿಗಳ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ, ಸುಖ, ಶಾಂತಿ ಮತ್ತು ನೆಮ್ಮದಿಗಾಗಿ ಪ್ರಾರ್ಥಿಸಲಾಯಿತು.
Kshetra Samachara
04/03/2022 12:43 pm