ಉಡುಪಿ: ಉಡುಪಿಯಿಂದ ಪ್ರಾರಂಭವಾದ ಹಿಜಾಬ್ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವುದರ ಹಿಂದೆ ಇಸ್ಲಾಮಿಕ್ ಸಂಘಟನೆಗಳ ಪ್ರಾಯೋಜಿತ ಸಂಚು ಇದೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹಿಂದೂ ಜಾಗರಣ ವೇದಿಕೆ ಮುಖಂಡರು , ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಡಿಸೆಂಬರ್ ತನಕ ನೆನಪಾಗದ ಧಾರ್ಮಿಕ ಹಕ್ಕು, ಏಕಾಏಕಿ ಪ್ರಾರಂಭಿವುದರಲ್ಲಿ PFI/CFI ಕೈವಾಡ ಇದೆ. ಹಿಜಾಬ್ ಗಾಗಿ ಗದ್ದಲ ಎಬ್ಬಿಸಿರುವ ಹೆಣ್ಣುಮಕ್ಕಳು ಮುಗ್ಧರಲ್ಲ, ಅವರು PFIನ ವಿದ್ಯಾರ್ಥಿ ಸಂಘಟನೆಯಾದ CFI ಸಂಪರ್ಕದಲ್ಲಿದ್ದಾರೆ ಎನ್ನುವುದಕ್ಕೆ ಆ ಹೆಣ್ಣುಮಕ್ಕಳ ಟ್ವಿಟರ್ ಅಕೌಂಟ್ ಸಾಕ್ಷಿ ಒದಗಿಸುತ್ತದೆ.
ಹಿಜಾಬ್ ವಿವಾದ ಎಬ್ಬಿಸುವಲ್ಲಿ CFI ಪಾತ್ರ ಎಷ್ಟಿದೆ ಎನ್ನುವುದು ವಿಜಯ್ ಪಟೇಲ್ ಎನ್ನುವವರು ತಮ್ಮ ಟ್ವಿಟರ್ ನಲ್ಲಿ ಬಯಲುಗೊಳಿಸಿದ್ದಾರೆ. ಇದನ್ನು ತನಿಖೆಗೆ ಒಳಪಡಿಸಿದರೆ ಹಿಜಾಬ್ ಕುತಂತ್ರದ ಹಿಂದಿರುವ ಎಲ್ಲ ಸಂಚುಗಳು ಬಯಲಾಗುತ್ತವೆ . ಹಾಗೆಯೇ ಕುಂದಾಪುರದಲ್ಲಿ ಹಿಜಾಬ್ ಗದ್ದಲ ನಡೆಯುವಾಗ ರೌಡಿ ಶೀಟರ್ PFI ಕಾರ್ಯಕರ್ತರು ಡ್ರಾಗರ್ ಸಮೇತ ಸಿಕ್ಕಿಬಿದ್ದಿರುವುದು ಕೋಮುಗಲಭೆ ಎಬ್ಬಿಸುವ ಸಂಚಿರುವುದು ಎದ್ದು ಕಾಣಿಸುತ್ತದೆ. ಧಾರ್ಮಿಕ ಹಕ್ಕಿನ ಹೆಸರಿನಲ್ಲಿ ಇಸ್ಲಾಮಿ ರಾಜ್ಯ ಮಾಡಲು ಅವಕಾಶ ನೀಡಬಾರದು ಎಂದು ಹಿಂಜಾವೇ ಮುಖಂಡರು ಆಗ್ರಹಿಸಿದರು.
Kshetra Samachara
14/02/2022 04:03 pm