ಉಡುಪಿ: ಹಿಜಾಬ್-ಕೇಸರಿ ಫೈಟ್ ಗೆ ಸಂಬಂಧಿಸಿ ಇಂದು ಉಡುಪಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ( ಸಿಎಫ್ಐ) ಸುದ್ದಿಗೋಷ್ಠಿ ನಡೆಸಿತು.
ಸಿಎಫ್ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಪುಂಜಾಲ್ ಕಟ್ಟೆ ಮಾತನಾಡಿ, ಹಿಜಾಬ್ ವಿವಾದ ಮತ್ತು ನಂತರದ ಗಲಭೆಗೆ ಸರಕಾರವೇ ನೇರ ಹೊಣೆ. ಆದರೆ, ಕ್ಯಾಂಪಸ್ ಫ್ರಂಟ್ ಮೇಲೆ ಶಿಕ್ಷಣ ಸಚಿವರು ಆರೋಪ ಮಾಡಿದ್ದಾರೆ.ಶಾಸಕ ರಘುಪತಿ ಭಟ್ ಮತ್ತು ಬಿಜೆಪಿ ಮುಖಂಡರ ಕುಮ್ಮಕ್ಕಿನಿಂದಲೇ ಹೀಗಾಗಿದೆ ಎಂದು ಆರೋಪಿಸಿದರು.
ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ದಾಳಿ ಯತ್ನ ಆಗಿದೆ.ಸಂಘ ಪರಿವಾರ ಮತ್ತು ಎಬಿವಿಪಿ ಇದಕ್ಕೇ ಕಾರಣ. ಆದರೆ,ಸಚಿವ ಬಿ.ಸಿ. ನಾಗೇಶ್ ಕ್ಯಾಂಪಸ್ ಫ್ರಂಟ್ ತಲೆಗೆ ಇದನ್ನು ಕಟ್ಟಲು ಮುಂದಾಗಿದ್ದಾರೆ. ಹಿಜಾಬ್ ಸಂವಿಧಾನಾತ್ಮಕ ಹಕ್ಕು. ನಾವು ಹಿಂಬದಿಯಲ್ಲಿ ಕುಮ್ಮಕ್ಕು ನೀಡಲ್ಲ, ಮುಂದೆ ನಿಂತು ಹೋರಾಡುತ್ತೇವೆ.
ಸಿಎಂ ಬೊಮ್ಮಾಯಿಯವರಿಗೆ ಮನವಿ ಮಾಡುತ್ತೇವೆ. ಎಲ್ಲ ಅಹಿತಕರ ಘಟನೆ ಕ್ಯಾಂಪಸ್ ಫ್ರಂಟ್ ತಲೆಗೆ ಹಾಕಬೇಡಿ.ಸಚಿವರು, ಪ್ರತಾಪ್ ಸಿಂಹ ಮತ್ತು ಪ್ರಮೋದ್ ಮುತಾಲಿಕ್ ವಿರುದ್ಧ ತನಿಖೆಯಾಗಬೇಕು. ನಾವು ಹೈಕೋರ್ಟ್ ನೀಡುವ ತೀರ್ಪಿಗೆ ಬದ್ಧರಾಗಿದ್ದೇವೆ. ಆದರೂ ಹಿಜಾಬ್ ಹಕ್ಕಿಗಾಗಿ ಹೋರಾಟ ಮುಂದುವರೆಯಲಿದೆ ಎಂದರು.
Kshetra Samachara
09/02/2022 03:32 pm