ಕೊಲ್ಲೂರು: ಕರಾವಳಿ ಪ್ರವಾಸದಲ್ಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದು ಕೊಲ್ಲೂರಿಗೆ ಭೇಟಿ ನೀಡಿದರು.
ಶ್ರೀಕೃಷ್ಣಮಠದಲ್ಲಿ ದರ್ಶನ ಪಡೆದ ಬಳಿಕ ರಾಜ್ಯಪಾಲರು, ಕೊಲ್ಲೂರಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಕ್ಷೇತ್ರಕ್ಕೆ ಆಗಮಿಸಿದ ರಾಜ್ಯಪಾಲರನ್ನು ಉಡುಪಿ ಜಿಲ್ಲಾಡಳಿತ ಮತ್ತು ದೇವಸ್ಥಾನದ ವತಿಯಿಂದ ಸ್ವಾಗತಿಸಲಾಯಿತು.
ದೇಗುಲದಲ್ಲಿ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಕೊನೆಗೆ ದೇವಸ್ಥಾನದ ವತಿಯಿಂದ ರಾಜ್ಯಪಾಲರಿಗೆ ಗೌರವ ಸಲ್ಲಿಸಲಾಯಿತು. ಬಳಿಕ ರಾಜ್ಯಪಾಲರು ಕೊಲ್ಲೂರಿನಿಂದ ಮುರುಡೇಶ್ವರಕ್ಕೆ ತೆರಳಿದರು.
Kshetra Samachara
03/12/2021 11:06 am