ಉದ್ಯಾವರ : ಉದ್ಯಾವರ ಗ್ರಾಮ ಪಂಚಾಯತ್ ನ ದಲಿತ ಸರಕಾರಿ ನೌಕರ ಲೆಕ್ಕ ಸಹಾಯಕರಾದ ಶಿವರಾಜ್ ಎಂ ಇವರಿಗೆ ಎಸಗಿದ ದೌರ್ಜನ್ಯ ಹಾಗೂ ಸಾಮಾಜಿಕ ಬಹಿಷ್ಕಾರದ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಕಾರ್ಯಕರ್ತರು ಉದ್ಯಾವ ಗ್ರಾಪಂ ಕಚೇರಿ ಎದುರು ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಿದರು.ಶಿವರಾಜು ಅವರಿಗೆ ದೌರ್ಜನ್ಯ ಎಸಗಿದ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ , ಸದಸ್ಯರಾದ ಯೋಗೀಶ್ ಕೋಟ್ಯಾನ್ ,ರಾಜೇಶ್ ಕುಂದರ್ ಮತ್ತು ರಮಾನಂದ ಶೇರಿಗಾರ್ ಅವರ ಸದಸ್ಯತ್ವ ರದ್ದು ಮಾಡಬೇಕು ಮತ್ತು ದೌರ್ಜನ್ಯ ಎಸಗಿದ ಇಬ್ಬರು ಗ್ರಾಮಸ್ಥರಾದ ಶೇಖರ್ ಕೋಟ್ಯಾನ್ , ಭಾಸ್ಕರ್ ಕೋಟ್ಯಾನ್
ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಸಂಸ ಮುಖಂಡರು ಈ ವೇಳೆ ಆಗ್ರಹಿಸಿದ್ದಾರೆ.
Kshetra Samachara
05/10/2021 01:06 pm