ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತಾಕತ್ತಿದ್ದಲ್ಲಿ, ಸಾವರ್ಕರ್ ಜನ್ಮದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಿ: ಬಿಜೆಪಿಗೆ ಸವಾಲು

ಬಿಜೆಪಿಗರಿಗೆ ನಿಜವಾಗಿ ತಾಕತ್ತಿದ್ದಲ್ಲಿ, ಸಾವರ್ಕರ್‌ರಿಗೆ ಗೌರವ ಕೊಡುವುದಾದಲ್ಲಿ, ಅವರ ಜನ್ಮದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಣೆ ಮಾಡಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಬಿಜೆಪಿಗೆ ನೇರವಾಗಿ ಸವಾಲೆಸೆದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿದ ಅವರು,‌ ಬಿಜೆಪಿ ರಾಜಕೀಯ ಲಾಭಕ್ಕಾಗಿ ಸಾವರ್ಕರ್ ಹೆಸರನ್ನು ಬಳಸಿಕೊಳ್ಳುತ್ತಿದೆ. ಕೆಲ ವರ್ಷಗಳ ಹಿಂದೆ ಸಿದ್ದರಾಮಯ್ಯ ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಬಗ್ಗೆ ಹೀನಾಯವಾಗಿ ಮಾತನಾಡಿದ್ದರು. ಅಂದು ತುಟಿಪಿಟಿಕ್ ಎನ್ನದ ಬಿಜೆಪಿ ಈಗ ಮುಂಬರುವ ಚುನಾವಣೆಯನ್ನ ಹಿನ್ನೆಲೆಯಾಗಿರಿಸಿಕೊಂಡು ಸಾವರ್ಕರ್ ವಿಚಾರದಲ್ಲಿ ದೊಂಬರಾಟ ಮಾಡುತ್ತಿದೆ ಎಂದು ಅವರು ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದರು.

ಸಿದ್ದರಾಮಯ್ಯ ಮಾಂಸ ತಿಂದರೆ ಬಿಜೆಪಿಗೇನು‌ ಆಗಬೇಕು. ಬಿಜೆಪಿಯವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲವೇ?. ಹೋಗಿದ್ದೇ ಆದಲ್ಲಿ ಸಿದ್ದರಾಮಯ್ಯರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ? ಹಾಗೆಂದು ನಾನು ಸಿದ್ದರಾಮಯ್ಯರನ್ನು ಪ್ರೋತ್ಸಾಹಿಸುತ್ತಿಲ್ಲ. ಅವರೊಬ್ಬ ಹೆದರುಪುಕ್ಕಲ. ಕೇವಲ ಮೊಟ್ಟೆ ಎಸೆದಿರುವುದಕ್ಕೆ ಹೆದರಿ ಓಡಿ ಬಂದಿರುವ ಸಿದ್ದರಾಮಯ್ಯರು ಸ್ವಾತಂತ್ರ್ಯ ವೀರ ಸಾವರ್ಕರ್ ಹೆಸರು ಹೇಳುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ.

ತಕ್ಷಣ ಕೇಂದ್ರ ಸರಕಾರ ಸ್ವಾತಂತ್ರ್ಯಕ್ಕಾಗಿ ಹೋರಾಡಿರುವ ಸಾವರ್ಕರ್ ಸೇರಿದಂತೆ ಯಾವುದೇ ಕ್ರಾಂತಿಕಾರಿಗಳ ಬಗ್ಗೆ ವಿವಾದಿತ ಹೇಳಿಕೆ ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಧರ್ಮೇಂದ್ರ ಒತ್ತಾಯಿಸಿದರು.

Edited By :
PublicNext

PublicNext

24/08/2022 05:39 pm

Cinque Terre

40.85 K

Cinque Terre

3