ಉದ್ಯಾವರ: ಉದ್ಯಾವರ ಮಹತೋಬಾರ ಶ್ರೀ ಸಿದ್ದಿವಿನಾಯಕ ದೇವಸ್ಥಾನವು 1300 ವರ್ಷಗಳ ಇತಿಹಾಸ ಹೊಂದಿದೆ.ಮುಜರಾಯಿ ಇಲಾಖೆಯಿಂದಲೇ ಈ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಡಳಿತವನ್ನು ನಡೆಸುತ್ತಿದ್ದು ಇದೀಗ ದೇವಸ್ಥಾನದಲ್ಲಿ ಅವ್ಯವಹಾರ ನಡೆಯುತ್ತಿದ್ದು ಭಕ್ತಾದಿಗಳ ಮನಸ್ಸಿಗೆ ಘಾಸಿ ಉಂಟಾಗಿದೆ ಎಂದು ಅರ್ಚಕ ರಂಗನಾಥ್ ಭಟ್ ಸಹಿತ ಊರ ಪ್ರಮುಖರು ಆರೋಪಿಸಿದ್ದಾರೆ.
ಈ ಸಂಬಂಧ ಇಂದು ಸುದ್ದಿಗೋಷ್ಟಿ ನಡಸಿದ ಊರವರು,ಸಾಕಷ್ಟು ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ಭಕ್ತರ ಪರವಾಗಿ ಜಿಲ್ಲಾಧಿಕಾರಿಗೂ ಲಿಖಿತ ದೂರು ನೀಡಲಾಗಿದೆ.ಸಿದ್ಧಿವಿನಾಯಕನ ಆಸ್ತಿಗೆ ಕನ್ನ ಹಾಕುವ ಆತಂಕ ಉಂಟಾಗಿರುವುದರಿಂದ ನಾವು ಮಾಧ್ಯಮದ ಮೂಲಕ ಈ ವಿಷಯ ತಿಳಿಸಬೇಕಾಯಿತು ಎಂದರು.
ದೇವಸ್ಥಾನದ ಜಾಗ ಮತ್ತು ಹಣಕಾಸಿಗೆ ಸಂಬಂಧಿಸಿ ನಡೆದಿರುವ ಅವ್ಯವಹಾರದ ತನಿಖೆ ನಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರಸ್ತುತ ದೇವಸ್ಥಾನಕ್ಕೆ ಸಂಬಂಧಪಟ್ಟ 50 ಸೆಂಟ್ಸ್ ಜಾಗವು ಕೃಷ್ಣ ಭಟ್ ಎಂಬುವರ ಹೆಸರಿನಲ್ಲಿದ್ದು ದೇವಸ್ಥಾನದ ಹೆಸರಿಗೆ ಮಾಡದೇ ಅವ್ಯವಹಾರ ನಡೆಸಿದ್ದಾರೆ.ಅಲ್ಲದೆ ಅನುವಂಶಿಕಾ ದೇವಸ್ಥಾನ ಹಾಗೂ ಅನುವಂಶಿಕ ಆಡಳಿತವೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸಿದ್ದಿವಿನಾಯಕ ದೇವಸ್ಥಾನವನ್ನು ರಕ್ಷಣೆ ಮಾಡಿ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಅರ್ಚಕ ರಂಗನಾಥ್ ,ಮಹೇಶ್ ಸುವರ್ಣ, ಚಂದ್ರಶೇಖರ ಮೈಂದನ್ ,ಶ್ರೀಮತಿ ನಾರಾಯಣಿ ಕೋಟ್ಯಾನ್ ,ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
10/10/2020 02:26 pm