ಉಡುಪಿ: ಉಡುಪಿಯ ಪೆರಂಪಳ್ಳಿ ಮಣಿಪಾಲ ರಸ್ತೆ ಅವ್ಯವಸ್ಥೆ ಬಗ್ಗೆ ತಮ್ಮನ್ನು ತರಾಟೆಗೆ ತೆಗೆದುಕೊಂಡ ಯುವತಿಗೆ ಉಡುಪಿ ಶಾಸಕ ರಘುಪತಿ ಭಟ್ ಉತ್ತರ ಕೊಟ್ಟಿದ್ದಾರೆ. ಯುವತಿಯ ವೀಡಿಯೋ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಕಿ ತಕ್ಷಣ ಎಚ್ಚೆತ್ತುಕೊಂಡ ಶಾಸಕರು ಯುವತಿಯ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದ್ದಾರೆ.
ಪೆರಂಪಳ್ಳಿ ಮಣಿಪಾಲ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇನ್ನೊಂದು ಲೇಯರ್ ಹಾಕುವುದಿದೆ. ಹೀಗಾಗಿ ಮಳೆಗೆ ಈ ಹಿಂದೆ ಹಾಕಿದ್ದ ಜಲ್ಲಿ ಹೋಗಿದೆ. ಮಳೆ ನಿಂತ ತಕ್ಷಣ ಇನ್ನೊಂದು ಲೇಯರ್ ಹಾಕಿ ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.
ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಏಳೆಂಟು ವರ್ಷ ಈ ರಸ್ತೆ ಏನೂ ಆಗುವುದಿಲ್ಲ. ಇದನ್ನು ಚತುಷ್ಫತ ರಸ್ತೆಯಾಗಿ ಪರಿವರ್ತಿಸಲು ಸಾಕಷ್ಟು ಕಷ್ಟ ಪಟ್ಟಿದ್ದೇನೆ. 26 ಕೋಟಿ ಅನುದಾನ ತಂದಿಸಿದ್ದೇನೆ. ಅಭಿವೃದ್ಧಿ ಮಾಡಿದಾಗ ಇಂತಹ ಟೀಕೆಗಳು ಸಾಮಾನ್ಯ. ಆ ಯುವತಿಯ ಬಗ್ಗೆ ನನಗೇನೂ ಅಸಮಾಧಾನ ಇಲ್ಲ. ಅವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಆದರೆ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಈ ರೀತಿ ಹೇಳುವುದು ಸರಿಯಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
Kshetra Samachara
27/08/2022 05:47 pm