ಸುರತ್ಕಲ್: ಸುರತ್ಕಲ್ ಸುತ್ತ ಮುತ್ತ ಬೃಹತ್ ಕಂಪನಿಗಳು ಇದ್ದು ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.ತುರ್ತು ಅವಘಡವಾದರೆ ಸುರತ್ಕಲ್ ಆರೋಗ್ಯ ಕೇಂದ್ರ ಹತ್ತಿರವಿರುವ ಕೇಂದ್ರವಾಗಿದ್ದು ಮೇಲ್ದರ್ಜೆಗೆ ಏರಿಸುವ ಅವಶ್ಯಕತೆಯಿದೆ .ಸರಕಾರ ಈ ಬಗ್ಗೆ ಒತ್ತು ನೀಡಬೇಕುವಎಂದು ಶಾಸಕ ಡಾ.ಭರತ್ ಶೆಟ್ಟಿ ವಿಧಾನ ಸಭೆಯಲ್ಲಿ ಒತ್ತಾಯಿಸಿದರು.
ಮಂಗಳೂರು ಮತ್ತು ಮುಲ್ಕಿ ನಡುವೆ ಅಂತರ ಹಾಗೂ ಆರೋಗ್ಯ ಕೇಂದ್ರ ಇದ್ದರೂ ತುರ್ತು ಸಂದರ್ಭ,ಅಪಾಯಕಾರಿ ಕಂಪನಿಗಳು,ಕಾರ್ಖಾನೆಗಳು ಇರುವ ಬಗ್ಗೆ ಗಮನ ಹರಿಸಿ ಮೇಲ್ದರ್ಜೆಗೆ ಏರಿಸಲು ಕ್ರಮ ತೆಗೆದುಕೊಳ್ಳಬೇಕು .25ರಲ್ಲಿ 13 ಹುದ್ದೆಗಳು ಖಾಲಿ ಇದ್ದು ಇದನ್ನು ಭರ್ತಿ ಮಾಡಲು ಮುಂದಾಗಬೇಕು ಎಂದರು.
ಇದಕ್ಕೆ ಸಕಾರಾತ್ಮಕ ವಾಗಿ ಉತ್ತರಿಸಿದ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಶಾಸಕರ ಕೋರಿಕೆ ಮೇರೆಗೆ ಮೇಲ್ದರ್ಜೆಗೆ ಏರಿಸಲು ಸರಕಾರ ಕ್ರಮಕೈಗೊಳ್ಳುತ್ತದೆ ಎಂದು ಉತ್ತರಿಸಿದರು.
Kshetra Samachara
24/09/2021 01:00 pm