ಸುಳ್ಯ:ರಸ್ತೆ ಪರಿಶೀಲನೆಗೆಂದು ಹೋಗುತ್ತಿದ್ದ ವೇಳೆ ಏರು ಪ್ರದೇಶದಲ್ಲಿ ಸಚಿವ ಎಸ್. ಅಂಗಾರ ಹೋಗುತ್ತಿದ್ದ ಜೀಪು ಮುಂದೆ ಚಲಿಸದೆ ಬಾಕಿಯಾಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಕೂಟೇಲು ಎಂಬಲ್ಲಿ ನಡೆದಿದೆ.
ಪರ್ಯಾಯ ಮಾರ್ಗವಿಲ್ಲದ ಕಾರಣ ಸಚಿವರು ಜೀಪಿನಿಂದ ಇಳಿದು ಏರು ರಸ್ತೆಯಲ್ಲಿ ನಡೆಕೊಂಡೇ ಹೋಗಬೇಕಾದ ಪರಿಸ್ಥಿತಿ ಎದುರಾಗಿದ್ದು, ಸಚಿವರ ಬೆಂಬಲಿಗರು ಜೀಪನ್ನು ತಳ್ಳಿ ಮುಂದಕ್ಕೆ ಚಲಿಸುವಂತೆ ಮಾಡಿದ್ದಾರೆ.
ಕೂಟೇಲು ಅರಂಬೂರು ಸಂಪರ್ಕ ರಸ್ತೆಯನ್ನು ದುರಸ್ತಿಪಡಿಸುವಂತೆ ಆ ಭಾಗದ ನಾಗರೀಕರು ಮನವಿಯನ್ನು ಸಲ್ಲಿಸಿದ್ದು,ಗಡಿಪಣೆಯಿಂದ ಮುಂದೆ ಕೂಟೇಲುನಲ್ಲಿರುವ ಸೇತುವೆಯ ಎರಡು ಬದಿಯ ಮಣ್ಣು ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಕುಸಿಯುವ ಹಂತದಲ್ಲಿದೆ. ತಡೆಗೋಡೆ ನಿರ್ಮಿಸುವ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದ್ದು, ಸಚಿವರು ಸೇತುವೆ ಬದಿ ಕುಸಿತಗೊಂಡಿರುವ ಪ್ರದೇಶವನ್ನು ವೀಕ್ಷಿಸಿದ್ದಾರೆ.
Kshetra Samachara
09/08/2021 04:28 pm