ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಕುಂಭಧ್ರೋಣ ಮಳೆಗೆ ಕಲ್ಲಾಪು ಜಲಾವೃತ- ಶಾಸಕ ಖಾದರ್ ಭೇಟಿ

ಉಳ್ಳಾಲ: ನಿರಂತರ ಸುರಿಯುತ್ತಿರುವ ಕುಂಭಧ್ರೋಣ ಮಳೆಗೆ ಕಲ್ಲಾಪು ಪ್ರದೇಶ ಜಲಾವೃತವಾಗಿದ್ದು ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿ ಜನಜೀವನ ಸ್ಥಬ್ದವಾಗಿದೆ.

ಕಲ್ಲಾಪಿನ ಸುಮಾರು ಐವತ್ತಕ್ಕೂ ಹೆಚ್ಚಿನ ಮನೆಗಳು, ಸಭಾಂಗಣ, ವಾಣಿಜ್ಯ ಕಟ್ಟಡಗಳು ಜಲಾವೃತಗೊಂಡಿದೆ. ಪ್ರತಿ ವರ್ಷವೂ ಈ ಪ್ರದೇಶಗಳು ಮಳೆಗಾಲದಲ್ಲಿ ನೆರೆಗೆ ಜಲಾವೃತಗೊಳ್ಳುತ್ತಿತ್ತು. ಸ್ಥಳೀಯರು ಹೇಳುವ ಪ್ರಕಾರ ಈ ಬಾರಿ ನೆರೆ ಬಂದಿಲ್ಲ. ಅಸಮರ್ಪಕ ಚರಂಡಿಗಳಲ್ಲಿ ನೀರು ಹರಿಯದ ಪರಿಣಾಮ‌ ಪ್ರದೇಶವು ಜಲಾವೃತಗೊಂಡಿದೆಯಂತೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಂಡ ವೇಳೆ ಕಲ್ಲಾಪುವಿನ ರಸ್ತೆ ಬದಿಯಲ್ಲಿದ್ದ ರಾಜ ಕಾಲುವೆ ಮುಚ್ಚಲ್ಪಟ್ಟಿದ್ದು ಇದರಿಂದ ಕಲ್ಲಾಪು ಪ್ರದೇಶವು ಕೃತಕ ನೆರೆಯಿಂದ ಜಲಾವೃತಗೊಂಡಿದೆ ಎಂದು ಸ್ಥಳೀಯರು ಅಳವತ್ತು ತೋಡಿಕೊಂಡಿದ್ದಾರೆ.

ಸ್ಥಳಕ್ಕೆ ಶಾಸಕ ಯು.ಟಿ ಖಾದರ್, ಪೆರ್ಮನ್ನೂರು ಗ್ರಾಮ‌ಕರಣಿಕೆ ಶ್ವೇತ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಾಸಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ತಕ್ಷಣ ಹೆದ್ದಾರಿ ಬದಿಯ ರಾಜಕಾಲುವೆಯನ್ನ ಸರಿಪಡಿಸಲು ಆದೇಶಿಸಿದ್ದಾರೆ. ಸ್ಥಳೀಯ ಕೌನ್ಸಿಲರ್ ರಾಜೇಶ್ ಯು.ಬಿ, ಸ್ಥಳೀಯರಾದ ಪುರುಷೋತ್ತಮ ಕಲ್ಲಾಪು ಇದ್ದರು.

Edited By : Manjunath H D
Kshetra Samachara

Kshetra Samachara

05/07/2022 06:40 pm

Cinque Terre

14.81 K

Cinque Terre

1

ಸಂಬಂಧಿತ ಸುದ್ದಿ