ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರಾರಾಜಿಸುತ್ತಿದೆ ಕೈಗಾರಿಕೆ ಪರ-ವಿರೋಧ ಫ್ಲೆಕ್ಸ್: ಬಲ ಪ್ರದರ್ಶನ ವೇದಿಕೆಗೆ ಆಸ್ಪದ?

ಬಳ್ಳುಂಜೆ: ಬಳ್ಳುಂಜೆ, ಉಳೆಪಾಡಿ, ಕೊಲ್ಲೂರು ಗ್ರಾಮಗಳ ಸುಮಾರು 1,091 ಎಕರೆ ಪ್ರದೇಶವನ್ನು ಕೈಗಾರಿಕೆಗಳಿಗೆ ವಶಪಡಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಈ ನಿರ್ಧಾರದ ವಿರುದ್ಧ ಸ್ಥಳೀಯರು ಪ್ರತಿಭಟನೆಗೆ ಇಳಿದಿದ್ದರು. ಈ ಪ್ರತಿಭಟನೆಗೆ ಮನ್ನಣೆ ನೀಡಿದ್ದ ಸರಕಾರ ಹಾಗೂ ಸ್ಥಳೀಯ ಸಂಸದರು- ಶಾಸಕರ ಸೂಚನೆ ಮೇರೆಗೆ ಯಾವ ಕಾರಣಕ್ಕೂ ಕೈಗಾರಿಕೆಗಳಿಗೆ ಕೃಷಿ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳುವುದಿಲ್ಲ ಎಂಬ ಭರವಸೆ ನೀಡಿತ್ತು. ಅದಾದ ನಂತರ ಭೂ ಸಂತ್ರಸ್ತರು ಹೋರಾಟಕ್ಕೆ ತಾತ್ಕಾಲಿಕ ವಿರಾಮ ಹಾಕಿದ್ದರು. ಆದ್ರೆ ಈಗ ಒಳಗಿಂದೊಳಗೆ ಪರ -ವಿರೋಧ ಶೀತಲ ಸಮರ ಮುಂದುವರೆದಿದೆ.

ಒಂದೆಡೆ ಕೈಗಾರಿಕೆಗಳಿಗೆ ಭೂ ಮಾಲೀಕರಿಂದ ಶೇ. 100ರಷ್ಟು ಬೆಂಬಲ ಸೂಚಿಸಿ ಕೈಗಾರಿಕೆ ಪರವಾದ ಫ್ಲೆಕ್ಸ್ ಬಳ್ಳುಂಜೆ ಪೇಟೆಯಲ್ಲಿ ಹಾಕಲಾಗಿದ್ದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿ ಮೂರು ಫ್ಲೆಕ್ಸ್‌ಗಳು ನಾಗರಿಕರ ಪರವಾಗಿ ಬಳ್ಳುಂಜೆ ಪೇಟೆಯಲ್ಲಿಯೇ ಪ್ರತ್ಯಕ್ಷವಾಗಿದೆ.

ಈ ನಡುವೆ ಭಾನುವಾರ ಭೂ ಸಂತ್ರಸ್ತರು ವಿವಿಧ ಸಂಘಟನೆಗಳ ಜೊತೆ ಸೇರಿ ಉಚಿತ ಶಿಬಿರಗಳು ಸಹಿತ ಅನೇಕ ಸಾಮಾಜಿಕ ಚಟುವಟಿಕೆ ಆಯೋಜಿಸಿ ಕೈಗಾರಿಕೆಗಳಿಗೆ ವಿರೋಧವಾಗಿ ಕೃಷಿಗೆ ಪೂರಕವಾಗಿ ತಮ್ಮ ಬಲ ಪ್ರದರ್ಶನ ತೋರಿಸಿದ್ದಾರೆ.

ಪರ- ವಿರೋಧ ಹೋರಾಟನಡುವೆ ಬಡಪಾಯಿ ನಾಗರಿಕರ ವೇದನೆ ಹೇಳತೀರದ ಮಟ್ಟಿಗೆ ಇಳಿದಿದ್ದು, ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರೂ ಇನ್ನೊಬ್ಬರನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ!

Edited By :
Kshetra Samachara

Kshetra Samachara

04/09/2022 09:07 pm

Cinque Terre

7.21 K

Cinque Terre

2