ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಕುಂಜೆ: "ಪುನರ್ವಸತಿ ಕಲ್ಪಿಸಿದರೆ ಕೈಗಾರಿಕೆ ಸ್ಥಾಪನೆಗಿಲ್ಲ ಅಭ್ಯಂತರ"

ಮುಲ್ಕಿ: ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಗ್ರಾಮಗಳ 1097 ಎಕರೆ ಭೂಮಿಯನ್ನು ಕೈಗಾರಿಕೆಗಳಿಗೆ ಭೂಸ್ವಾಧೀನ ಪಡಿಸಿಕೊಳ್ಳುವ ಸರಕಾರದ ಆದೇಶದ ಬಗ್ಗೆ ಉದ್ಯಮಿ ಡಾ.ವಿರಾರ್ ಶಂಕರ್ ಶೆಟ್ಟಿ, ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಳ್ಕುಂಜೆ ಕುಗ್ರಾಮವಾಗಿದ್ದು ಕೈಗಾರಿಕೆಗಳು ಬರುವುದು ಖುಷಿಯ ವಿಚಾರ. ಈ ಪ್ರದೇಶದಲ್ಲಿ ಶೇ. 70ರಷ್ಟು ಬಂಜರು ಭೂಮಿ ಇದೆ. ಕೃಷಿ ಪ್ರದೇಶ, ದೇವಸ್ಥಾನ- ಚರ್ಚ್- ಮಸೀದಿ ಸ್ಥಳ ಉಳಿಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಲು ಶೇ.80 ಗ್ರಾಮಸ್ಥರ ಸಮ್ಮತಿ ಇದೆ ಎಂದರು.

ಗ್ರಾಮದಲ್ಲಿ ಹೆಚ್ಚಿನವರು ಕೈಗಾರಿಕೆಗಳಿಗೆ ಭೂಮಿ ಕೊಡಲು ಸಿದ್ಧರಿದ್ದು, ಪುನರ್ವಸತಿ ಕಲ್ಪಿಸುವ ಒಡಂಬಡಿಕೆ ಹಾಗೂ ಯಾವುದೇ ಹಾನಿಕಾರಕ ಕೈಗಾರಿಕೆಗಳಿಗೆ ಸಮ್ಮತಿಯಿಲ್ಲ. ಸ್ಥಳೀಯರಿಗೆ ಉದ್ಯೋಗ ಸಹಿತ ಅನೇಕ ಪ್ಯಾಕೇಜ್‌ ನೀಡಿದರೆ ಗ್ರಾಮದಲ್ಲಿ ಕೈಗಾರಿಕೆಗಳಿಗೆ ಸಂಪೂರ್ಣ ಬೆಂಬಲವಿದೆ ಎಂದರು.

ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಕೈಗಾರಿಕೆಗಳು ಬಂದರೆ ಗ್ರಾಮದ ಅಭಿವೃದ್ಧಿಯಾಗುತ್ತದೆ. ಆದರೆ, ನಿರ್ವಸಿತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಹೇಳಿದರು. ದೇವಸ್ಥಾನ ಮೊಕ್ತೇಸರ ಮೋಹನದಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

15/06/2022 08:28 pm

Cinque Terre

10.28 K

Cinque Terre

6