ಕುಂದಾಪುರ: ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಜಡ್ಕಲ್ ಗ್ರಾಮದ ಮುದೂರಿನಲ್ಲಿ ಡೆಂಘಿ ಜ್ವರದ ಹಾವಳಿಗೆ ಜನ ಬೆಚ್ಚಿದ್ದಾರೆ.
ಪ್ರತಿದಿನ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ 50ಕ್ಕೂ ಮಿಕ್ಕಿ ರೋಗಿಗಳು ದಾಖಲಾಗುತ್ತಿದ್ದು, ಡೆಂಘಿ ಪೀಡಿತರಿಗೆ ವಿಶೇಷ ವಾರ್ಡ್ ತೆರೆದು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.ಉಡುಪಿ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಿಗೂ ಪೀಡಿತರು ದಾಖಲಾಗುತ್ತಿದ್ದಾರೆ.
ಇವತ್ತು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡೆಂಘಿ ಪೀಡಿತರ ಯೋಗಕ್ಷೇಮ ವಿಚಾರಿಸಿದರು.
Kshetra Samachara
13/05/2022 01:40 pm