ವರದಿ: ರಹೀಂ ಉಜಿರೆ
ಉಡುಪಿ: ಉಡುಪಿಯ ಬಿಆರ್ ಎಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮ್ಯಾನೇಜ್ ಮೆಂಟ್ ಮತ್ತು ಸಿಬ್ಬಂದಿ ತಿಕ್ಕಾಟ ಜೋರಾಗಿದೆ. ಮ್ಯಾನೇಜ್ ಮೆಂಟ್ ನವರು ನಿನ್ನೆ ಏಕಾಏಕಿ 16 ಮಂದಿಯನ್ನು ನೌಕರಿಯಿಂದ ಕಿತ್ತು ಹಾಕಿದ್ದಾರೆ.ಇದರಿಂದ ರೊಚ್ಚಿಗೆದ್ದ ಸಿಬ್ಬಂದಿ ಇಂದು ಕೂಡ ಆಸ್ಪತ್ರೆ ಮುಂದೆ ಮುಷ್ಕರ ನಡೆಸಿದರು.
ಉಡುಪಿಯ ಹಾಜಿ ಅಬ್ದುಲ್ಲ ,ಕೂಸಮ್ಮ ಶಂಭು ಶೆಟ್ಟಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೇ ಈಗ ಚಿಕಿತ್ಸೆಯ ಅಗತ್ಯವಿದೆ.ಕಳೆದ ಕೆಲವು ತಿಂಗಳಿನಿಂದ ಇಲ್ಲಿನ ಮ್ಯಾನೇಜ್ ಮೆಂಟ್ ಮತ್ತು ಸಿಬ್ಬಂದಿ ನಡುವಿನ ತಿಕ್ಕಾಟ ಇನ್ನೂ ಬಿರುಸು ಪಡೆದಿದೆ. ನಿನ್ನೆ 16 ಜನರನ್ನು ಕೆಲಸದಿಂದ ವಜಾ ಮಾಡಿದ್ದಕ್ಕೆ ಆಸ್ಪತ್ರೆಯ ಎಲ್ಲ ಸಿಬ್ಬಂದಿ ರೊಚ್ಚಿಗೆದ್ದಿದ್ದಾರೆ.ನಿನ್ನೆ ತಡರಾತ್ರಿ ತನಕ ಮುಷ್ಕರ ಹೂಡಿ ಮುತ್ತಿಗೆ ಹಾಕಿದ್ದ ಆಸ್ಪತ್ರೆ ಸಿಬ್ಬಂದಿ ಇವತ್ತು ಹಗಲೂ ಮುಷ್ಕರ ಮುಂದುವರೆಸಿದ್ದಾರೆ.ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜೊತೆ ಅಳಲು ತೋಡಿಕೊಂಡ ಸಿಬ್ಬಂದಿ ನಮಗೆ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ವಾಯ್ಸ್ :ಈ ಮೊದಲು ಆಸ್ಪತ್ರೆಯಲ್ಲಿ ಸರಿಯಾಗಿ ವೇತನ ನೀಡುತ್ತಿರಲಿಲ್ಲ.ವೇತನ ಪಾವತಿಸದೇ ಇದ್ದ ಕಾರಣ ಇಲ್ಲಿಯ ವೈದ್ಯರು ಮತ್ತು ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹದಿನಾರು ಜನರಿಗೆ ನಿನ್ನೆ ಏಕಾಏಕಿ ಗೇಟ್ ಪಾಸ್ ನೀಡಲಾಗಿತ್ತು.ಬಿ.ಅರ್ ಶೆಟ್ಟಿ ಮ್ಯಾನೇಜ್ ಮೆಂಟ್ ನ ಈ ನಿರ್ಧಾರಕ್ಕೆ ಇಡೀ ಆಸ್ಪತ್ರೆ ಸಿಬ್ಬಂದಿಯೇ ತಿರುಗಿ ಬಿದ್ದಿದ್ದಾರೆ.ಇವತ್ತು ಎಮರ್ಜೆನ್ಸಿ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಸ್ಥಗಿತಗೊಂಡಿವೆ.ಹದಿನಾರು ಜನ ಮಾತ್ರ ಅಲ್ಲ, ನಮ್ಮೆಲ್ಲರನ್ನೂ ಕೆಲಸದಿಂದ ವಜಾ ಮಾಡಿ ಎಂದು ಆಸ್ಪತ್ರೆ ನೌಕರರು ಆಸ್ಪತ್ರೆ ಮುಂದೆ ಮುಷ್ಕರ ಹೂಡಿದ್ದಾರೆ.
ಒಟ್ಟಿನಲ್ಲಿ ಬಡವರಿಗೆ ಆರೋಗ್ಯ ಸೇವೆ ನೀಡುತ್ತಿದ್ದ ಈ ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಗೇ ಈಗ ಚಿಕಿತ್ಸೆ ಬೇಕಾಗಿದೆ.ಆಸ್ಪತ್ರೆಯನ್ನು ಆದಷ್ಟು ಬೇಗ ಸರಕಾರವೇ ವಹಿಸಿಕೊಂಡರೆ ಒಳ್ಳೆಯದು ಎಂಬುದು ಉಡುಪಿ ಜನತೆಯ ಆಗ್ರಹವಾಗಿದೆ.
Kshetra Samachara
25/08/2021 03:38 pm