ಮಂಗಳೂರು: ಮಂಗಳೂರಿನ ಜಿಲ್ಲಾ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ 32 ಬೆಡ್ ಗಳ ಮೆಡಿಸಿನ್ ವಿಭಾಗದ ತೀವ್ರ ನಿಗಾ ಘಟಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಎಸ್ ಡಿಆರ್ ಎಫ್ ಅನುದಾನದಲ್ಲಿ ನಿರ್ಮಾಣಗೊಂಡಿರುವ ಐಸಿಯು ಘಟಕದಲ್ಲಿ ವೆಂಟಿಲೇಟರ್, ಮೊನಿಟರ್ ಸೇರಿ ಅಗತ್ಯ ವೈದ್ಯಕೀಯ ಉಪಕರಣಗಳಿದೆ.
ಮಕ್ಕಳ ಮತ್ತು ವಯಸ್ಕರ ಚಿಕಿತ್ಸೆಗೆ ಬಳಸಲು ತಯಾರಾಗಿರುವ ಘಟಕ ಇದಾಗಿದೆ. ಇದೇ ವೇಳೆ ಆರೋಗ್ಯ ಸಚಿವ ಡಾ.ಸುಧಾಕರ್, ಮೀನುಗಾರಿಕೆ ಸಚಿವ ಎಸ್. ಅಂಗಾರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಇಂಧನ ಸಚಿವ ಸುನೀಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಜಿಲ್ಲೆಯ ಶಾಸಕರ ಉಪಸ್ಥಿತರಿದ್ದರು.
Kshetra Samachara
12/08/2021 01:56 pm