ಮಂಗಳೂರು: ದೇಶದಲ್ಲಿ ಕೊರೊನಾ 3ನೇ ಅಲೆ ಆತಂಕ ಮೂಡುತ್ತಿದೆ. ಆದರೆ, ಸರಕಾರಿ ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್ ನಿರ್ವಹಿಸಲು ಸಿಬ್ಬಂದಿ ಇಲ್ಲ. ಫ್ರಂಟ್ ಲೈನ್ ವರ್ಕರ್ಸ್‌ಗೆ ಬೂಸ್ಟರ್ ಡೋಸ್ ನೀಡಲು ಕ್ರಮ ಕೈಗೊಳ್ಳಿ ಎಂದು ಉಳ್ಳಾಲ ಶಾಸಕ ಯು.ಟಿ ಖಾದರ್ ಸಲಹೆ ನೀಡಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಹೊಸ ವೈರಸ್ ಅನ್ನು ಹೇಗೆ ನಿಯಂತ್ರಿಸಬೇಕೆಂಬುದನ್ನು ಯೋಚಿಸಬೇಕು. ಅದರ ಬದಲು ಶಾಲಾ- ಕಾಲೇಜು ಮುಚ್ಚುವುದು,ಗಡಿ ಬಂದ್ ಮಾಡುವುದು ಎನ್ನುವ ಮೂಲಕ ಜನರಿಗೆ ಗೊಂದಲ ಮೂಡಿಸುವುದಲ್ಲ. ಇದೆಲ್ಲದರ ಬದಲು ವಾಕ್ಸಿನೇಷನ್ ಶೀಘ್ರ ಮುಗಿಸಿ. ಜಿಲ್ಲೆಯಲ್ಲಿಶೇ. 90 ಮೊದಲ ಡೋಸ್, 60 ಶೇ. 2ನೇ ಡೋಸ್ ಆಗಿದೆ. ಅದನ್ನು 100 ಶೇಕಡಾಗೊಳಿಸಿ ಎಂದರು.
ಸರಕಾರಿ ಆಸ್ಪತ್ರೆಯಲ್ಲಿರುವ ಗುತ್ತಿಗೆ ಆಧಾರಿತ ಆರೋಗ್ಯ ಸಿಬ್ಬಂದಿಯ ಗುತ್ತಿಗೆ ಅವಧಿ ಮುಗಿಯುತ್ತಾ ಬಂದಿದೆ.ಅದನ್ನು ಇನ್ನೂ ಆರು ತಿಂಗಳು ಮುಂದುವರೆಸಿ. ಫ್ರಂಟ್ ಲೈನ್ ವರ್ಕರ್ಸ್‌ಗಳಾದ ಆಶಾ ಕಾರ್ಯಕರ್ತೆಯರು, ಲ್ಯಾಬ್ ಟೆಕ್ನಿಷಿಯನ್‌ಗೆ ಸರ್ಕಾರದಿಂದ ಟ್ಯಾಬ್ ಕೊಡಿ. ಯಾಕಂದ್ರೆ ಈಗ ಸರಕಾರದ ಕಾರ್ಯಕ್ರಮಕ್ಕೆ ಸ್ವಂತ ಮೊಬೈಲ್ ಬಳಸುತ್ತಿದ್ದಾರೆ ಎಂದರು.
ಇನ್ನೂ ಸಹ ವಾಕ್ಸಿನೇಷನ್ ತೆಗೆದುಕೊಳ್ಳದವರಿಗೆ ಕಠಿಣ ನಿಯಮ ಜಾರಿಗೆ ತನ್ನಿ. ಏರ್‌ಪೋರ್ಟ್‌ನಲ್ಲಿಯೂ ಆರ್‌ಟಿಪಿಆರ್ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಇಲಾಖೆ, ಜನಪ್ರತಿನಿಧಿ, ಹಿರಿಯ ಅಧಿಕಾರಿಗಳ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ.
Kshetra Samachara
29/11/2021 01:34 pm