ಉಡುಪಿ : ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಿದ್ದು, ನನ್ನನ್ನೂ ಸೇರಿದಂತೆ ಎಲ್ಲರೂ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು.ಇನ್ನು ನನ್ನ ಯಾವುದೇ ಅಭಿನಂದನಾ ಸಭೆಗಳು ನಡೆಯುವುದಿಲ್ಲ.ನಾನು ನನ್ನ ಕಾರ್ಯಕರ್ತರಿಗೆ ವಿನಂತಿ ಮಾಡಿಕೊಳ್ಳುತ್ತೇನೆ.ನಿನ್ನೆ ಅಭಿನಂದನೆ ಸಭೆ ನಡೆದಿದೆ, ಎಲ್ಲವೂ ಮುಗಿದಿದೆ.ಇವತ್ತಿನಿಂದ ನಾನು ಯಾವುದೇ ಅಭಿನಂದನಾ ಸಭೆಯಲ್ಲಿ ಭಾಗವಹಿಸುವುದಿಲ್ಲ.ನನಗಾಗಿ ಯಾವುದೇ ಅಭಿನಂದನಾ ಸಭೆ ಏರ್ಪಡಿಸಬೇಡಿ.ನಾನೇ ಸ್ವಯಂ ಅನುಶಾಸನ ಹಾಕಿಕೊಳ್ಳುತ್ತೇನೆ.ಎಲ್ಲರೂ ಇದೇ ನಿಯಮ ಅನುಸರಿಸಬೇಕು ಎಂದು ವಿನಂತಿ ಮಾಡುತ್ತೇನೆ ಎಂದುಉಡುಪಿಯಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಅಂದಹಾಗೆ ,ಸಚಿವರು ನಿನ್ನೆ ಸಾವಿರಾರು ಜನರಿರುವ ಅಭಿನಂದನಾ ಸಭೆಯಲ್ಲಿ ಭಾಗವಹಿಸಿದ್ದರು.ಕೋವಿಡ್ ಕಾಲದ ಈ ಸಮಾರಂಭ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು.
Kshetra Samachara
07/08/2021 07:03 pm