ಸುಬ್ರಮಣ್ಯ:ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಜೂ.30ರಿಂದ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಲಭ್ಯ ಮಾಹಿತಿಗಳ ಪ್ರಕಾರ ಅವರ ಪ್ರವಾಸ ವಿವರಗಳು ಹೀಗಿವೆ. ಅವರು ಜೂ.30ರ ಗುರುವಾರ ಮಧ್ಯಾಹ್ನ 12.45ಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಇಲ್ಲಿನ ಅಥಿತಿಗೃಹದಲ್ಲಿ ವಾಸ್ತವ್ಯ ಹೂಡುವರು. ಮಧ್ಯಾಹ್ನ 3 ಗಂಟೆಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ರಾಜ್ಯಪಾಲರು ಸಂವಾದ ನಡೆಸಲಿದ್ದು ರಾತ್ರಿ ದೇವಸ್ಥಾನದ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು. ನಾಳೆ ಬೆಳಗ್ಗೆ ಅಂದರೆ ಜುಲೈ 1ರ ಬೆಳಿಗ್ಗೆ 6 ಗಂಟೆಗೆ ಕುಕ್ಕೆ ಸುಬ್ರಮಣ್ಯದಲ್ಲಿ ದೇವರ ದರ್ಶನ ಪಡೆಯಲಿರುವ ಅವರು 7 ಗಂಟೆಗೆ ಅತಿಥಿ ಗೃಹಕ್ಕೆ ಆಗಮಿಸುವರು. 9.30ಕ್ಕೆ ಮಡಿಕೇರಿಗೆ ತೆರಳುವರು ಎಂದು ತಿಳಿದು ಬಂದಿದೆ.
Kshetra Samachara
30/06/2022 11:44 am