ಮಂಗಳೂರು: ಭಾರೀ ಗೊಂದಲ ಸೃಷ್ಟಿಸಿದ್ದ ನಗರದ ಮಳಲಿ ಮಸೀದಿಯಲ್ಲಿ ಹಿಂದೂ ದೇವಾಲಯ ಶೈಲಿಯ ಕಟ್ಟಡ ಪತ್ತೆ ವಿಚಾರದಲ್ಲಿ ಇಂದು ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆದಿದೆ.
ಈ ಗೊಂದಲವನ್ನು ಕಾನೂನು ಮುಖೇನವೇ ಇತ್ಯರ್ಥ ಪಡಿಸಬೇಕೆಂದು ಮಸೀದಿಯ ಆಡಳಿತ ಕಮಿಟಿ ಹಾಗೂ ಹಿಂದೂ ಸಂಘಟನೆಯ ಮುಖಂಡರಿಗೆ ಮನವರಿಕೆ ಮಾಡಲಾಗಿದೆ.
ನಗರದ ಮಳಲಿಯ ಅಬ್ದುಲ್ಲಾಹಿಲ್ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯಲ್ಲಿ ಎಪ್ರಿಲ್ 22ರಂದು ನಿರ್ಮಾಣ ಕಾಮಗಾರಿ ವೇಳೆ ಹಿಂದೂ ದೇವಾಲಯ ಶೈಲಿಯ ಕಟ್ಟಡವೊಂದು ಪತ್ತೆಯಾಗಿತ್ತು. ತಕ್ಷಣ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಮಸೀದಿಯ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು.
Kshetra Samachara
24/05/2022 03:05 pm