ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ನಾಳೆ ರಸ್ತೆ ಬದಿ ತ್ಯಾಜ್ಯ ವಿಲೇವಾರಿ ಅಭಿಯಾನ; ಶಾಸಕ ಖಾದರ್ ಚಾಲನೆ

ಖಾಸಗಿ ಶಿಕ್ಷಣ ಸಂಸ್ಥೆಗಳು, ಜನಶಿಕ್ಷಣ ಟ್ರಸ್ಟ್ ಸೇರಿದಂತೆ ಬೆಳ್ಮ, ಮುನ್ನೂರು, ಮಂಜನಾಡಿ, ಕೊಣಾಜೆ, ಪಜೀರು, ಕುರ್ನಾಡು ಪಂಚಾಯತ್ ಗಳ ಸಹಕಾರದೊಂದಿಗೆ ಕುತ್ತಾರಿನಿಂದ ಮುಡಿಪು ತನಕದ ರಸ್ತೆ ತ್ಯಾಜ್ಯ ವಿಲೇವಾರಿ ಅಭಿಯಾನ ನಾಳೆ ನಡೆಯಲಿದ್ದು, ಶಾಸಕ ಯು.ಟಿ.ಖಾದರ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬೆಳ್ಮ ಗ್ರಾಪಂ ಅಧ್ಯಕ್ಷ ಅಬ್ದುಲ್ ಸತ್ತಾರ್ ಹೇಳಿದರು.

ಅವರು ಬೆಳ್ಮ ಗ್ರಾಪಂ ಸಭಾಂಗಣದಲ್ಲಿ ಈ‌ ಬಗ್ಗೆ ಮಾಹಿತಿ ನೀಡಿ, ಅಭಿಯಾನದಲ್ಲಿ ಮುಡಿಪು ತನಕ ಕಸದ ರಾಶಿಯನ್ನು ಸ್ವಚ್ಛಗೊಳಿಸಿ, ರಸ್ತೆ ಬದಿ ಹಣ್ಣುಗಳ ಗಿಡಗಳನ್ನು ನೆಟ್ಟು, ಕಸ ವಿಲೇವಾರಿ ನಡೆಸಿ, ನಾಮಫಲಕ ಅಳವಡಿಸಿ ಜನಸಾಮಾನ್ಯರಲ್ಲಿ ಸ್ವಚ್ಛತೆ ಅರಿವು ಮೂಡಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜನಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಕುರ್ನಾಡು ಗ್ರಾಪಂ ಅಧ್ಯಕ್ಷ ಗಣೇಶ್ ನಾಯ್ಕ್, ಕೊಣಾಜೆ ಗ್ರಾಪಂ ಅಧ್ಯಕ್ಷೆ ಚಂಚಲಾಕ್ಷಿ, ಮುನ್ನೂರು ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು

Edited By :
Kshetra Samachara

Kshetra Samachara

24/06/2022 07:21 pm

Cinque Terre

15.29 K

Cinque Terre

0