ಉಳ್ಳಾಲ: ಉಳ್ಳಾಲವು ಪ್ರತ್ಯೇಕ ತಾಲೂಕಾಗಿ ಬೇರ್ಪಟ್ಟ ಕಾರಣದಿಂದಾಗಿ ಮುಂದೆ ಇಲ್ಲಿಗೆ ಎಲ್ಲಾ ಹೊಸ ಯೋಜನೆ, ಸೌಲಭ್ಯ,ಕಾರ್ಯಕ್ರಮಗಳು ಬರಲಿವೆ ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಉಳ್ಳಾಲ ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ ಜಿಲ್ಲೆ ಜಂಟಿ ಪ್ರಾಯೋಜಕತ್ವದಲ್ಲಿ ಕೊಲ್ಯ ಕುಲಾಲ ಭವನದಲ್ಲಿ ಶನಿವಾರದಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಲುವಾಗಿ ನಡೆದ "ಅಮೃತ ಭಾರತಿಗೆ ಕನ್ನಡದ ಆರತಿ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಪೀಳಿಗೆಯು ಮಹಾತ್ಮಗಾಂಧಿ, ಅಂಬೇಡ್ಕರ್‌ರವರ ಆದರ್ಶ ಜೀವನದ ಬಗೆಗಿನ ಪುಸ್ತಕಗಳನ್ನ ಓದಬೇಕು.ಆ ಮೂಲಕ ಸಮಾಜದಲ್ಲಿ ತಾವು ಸತ್ಪ್ರಜೆಯಾಗಿ ರೂಪುಗೊಳ್ಳಬೇಕು.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಸಣ್ಣ ಗುಂಡು ಸೂಜಿ ತಯಾರಿಸುವ ಫ್ಯಾಕ್ಟರಿ ಕೂಡ ಇಲ್ಲಿ ಇರಲಿಲ್ಲ. ಆದರೆ ಇವತ್ತು ನಮ್ಮ ದೇಶ ಅಣು ಬಾಂಬನ್ನೇ ತಯಾರು ಮಾಡುವಷ್ಟು ಬೆಳೆಯಳು ಇಲ್ಲಿನ ವಿಜ್ನಾನ, ತಂತ್ರಜ್ಞಾನಗಳೇ ಕಾರಣ ಎಂದರು. ಕಾರ್ಯಕ್ರಮಕ್ಕೂ ಮೊದಲು ತೊಕ್ಕೊಟ್ಟು ವೀರ ಮಾರುತಿ ವ್ಯಾಯಾಮ ಶಾಲೆಯಿಂದ ಕೊಲ್ಯ, ಕುಲಾಲ ಮಂದಿರದವರೆಗೆ ಸಾಂಸ್ಕೃತಿಕ ತಂಡದಿಂದ ಆಕರ್ಷಕ ಮೆರವಣಿಗೆ ನಡೆಯಿತು.
ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಸಭಾಧ್ಯಕ್ಷತೆ ವಹಿಸಿದ್ದರು. ವಿದಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್, ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದಿ.ಮೈಸೂರ್ ಇಲೆಕ್ಟ್ರಿಕಲ್ಸ್ ಲಿ.ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು. ಉಳ್ಳಾಲ ತಾಲೂಕು ತಹಶೀಲ್ದಾರ್ ಗುರುಪ್ರಸಾದ್ ಸ್ವಾಗತಿಸಿ, ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ವಂದಿಸಿದರು. ತ್ಯಾಗಂ ಹರೇಕಳ ನಿರೂಪಿಸಿದರು.
Kshetra Samachara
28/05/2022 04:30 pm