ಸುಳ್ಯ: ಸತತ ಆರು ಬಾರಿ ಸುಳ್ಯ ಶಾಸಕರಾಗಿ ಆಯ್ಕೆಯಾದ ಎಸ್.ಅಂಗಾರ ಅವರು ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದಾರೆ.
ಕಡಬದಲ್ಲಿ ನಡೆದ ಕಾರ್ಯಕ್ರಮವೊಂದರ ನಂತರ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, ಸಮಿತಿಯ ಮೀಟಿಂಗ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದ್ದಾರೆ. ಆದರೆ, ಅಧಿಕೃತ ಮೂಲಗಳ ಪ್ರಕಾರ ಬೆಂಗಳೂರಿನಿಂದ ಕರೆ ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
ಬೆಂಗಳೂರು ತಲುಪಿದ ಸರಳ- ಸಜ್ಜನಿಕೆ ವ್ಯಕ್ತಿತ್ವದ ಶಾಸಕ ಎಂಬ ಖ್ಯಾತಿಯ ಎಸ್.ಅಂಗಾರ ಅವರು ತನಗೆ ಮತ್ತು ಇಂದು ತನ್ನ ಜೊತೆ ಊರಿನಿಂದ ಬೆಂಗಳೂರಿಗೆ ಬಂದಿರುವ ಕಾರ್ಯಕರ್ತರಿಗಾಗಿ ರಾತ್ರಿ ಊಟಕ್ಕೆ ಸ್ವತಃ ತಾನೇ ಸಾಂಬಾರು ತಯಾರಿಯಲ್ಲಿ ತೊಡಗಿದ್ದ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶಾಸಕ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ಖಚಿತ ಎಂಬ ಹೇಳಿಕೆಯನ್ನು ಸುಳ್ಯ ಮಂಡಲ ಬಿಜೆಪಿ ಪದಾಧಿಕಾರಿಗಳು ನೀಡಿದ್ದಾರೆ.
Kshetra Samachara
13/01/2021 07:48 am