ಕಾರ್ಕಳ: ಇಲ್ಲಿ ನಾವು ಯಾವುದೇ ಮತಾಂತರ ಮಾಡುತ್ತಿಲ್ಲ. ನಾವು ಪ್ರಾರ್ಥನೆ ಮಾತ್ರ ಮಾಡುತ್ತಿದ್ದೇವೆ ಎಂದು ಕಾರ್ಕಳದ ಮತಾಂತರ ಕೇಂದ್ರದ ಮುಖ್ಯಸ್ಥ ಬೆನೆಡಿಕ್ಟ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇದು ಮಂಗಳೂರಿನ ಕ್ರೈಸ್ತ ಸಂಸ್ಥೆ ನಡೆಸುತ್ತಿರುವ ಕೇಂದ್ರ. ನಾವು ಯಾರನ್ನೂ ಮತಾಂತರ ಮಾಡುವುದಿಲ್ಲ. ಅನ್ಯ ಧರ್ಮದವರು ಕೆಲವರು ಪ್ರಾರ್ಥನೆಗಾಗಿ ಬರುತ್ತಾರೆ. ಇವತ್ತು ಪ್ರಾರ್ಥನೆ ನಡೆಸುತ್ತಿರುವಾಗ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಏಕಾಏಕಿ ನುಗ್ಗಿ ಗಲಾಟೆ ಮಾಡಿದ್ದಾರೆ. ವಿಡಿಯೋ ತೆಗೆದಿದ್ದಾರೆ. ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮತಾಂತರ ಮಾಡುವುದು ನಮ್ಮ ಕೆಲಸ ಅಲ್ಲ.ನಾವು ಕೇವಲ ಪ್ರಾರ್ಥನೆ ಮಾತ್ರ ಮಾಡುತ್ತಿದ್ದೆವು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
10/09/2021 04:06 pm