ಉಡುಪಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ಸಿಕ್ಕಿದ್ದು ,ಇವತ್ತು ಉಡುಪಿಗೆ ಎಡಿಜಿಪಿ ಪ್ರತಾಪ್ ರೆಡ್ಡಿ ಆಗಮಿಸಿದ್ದಾರೆ.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಡಿಜಿಪಿ ನೇತೃತ್ವದಲ್ಲಿ ಸತತ ನಾಲ್ಕು ಗಂಟೆಗಳಿಂದ ಚರ್ಚೆ ನಡೆಯುತ್ತಿದೆ.ಸಭೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಮತ್ತು 5 ತನಿಖಾ ತಂಡದ ಅಧಿಕಾರಿಗಳು ಭಾಗಿಯಾಗಿದ್ದಾರೆ.
ತನಿಖೆಯನ್ನು ಐದು ಆಯಾಮಗಳಲ್ಲಿ ಮುನ್ನಡೆಸಲು ವಿಶೇಷ ತಂಡ ರಚನೆ ಮಾಡಲಾಗಿದೆ. ತನಿಖೆಯ ನೇತೃತ್ವವನ್ನು ರಾಜ್ಯದ ಅತ್ಯಂತ ಚಾಣಾಕ್ಷ ಅಧಿಕಾರಿ ಎಂದು ಪ್ರಸಿದ್ಧಿ ಪಡೆದಿರುವ ಪ್ರತಾಪ್ ರೆಡ್ಡಿ ವಹಿಸಿದ್ದಾರೆ.
PublicNext
16/04/2022 02:09 pm