ಮಂಗಳೂರು: ಮಾಜಿ ಸಚಿವ ಯು.ಟಿ.ಖಾದರ್ ಅವರ ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದರೆ ಎಂಬ ಶಂಕೆ ವ್ಯಕ್ತವಾಗಿದೆ.
ಮಂಗಳೂರಿನ ದೇರಳಕಟ್ಟೆಯಿಂದ ನಂತೂರು ಸರ್ಕಲ್‌ವರೆಗೂ ಅಪರಿಚಿತರು ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ. ಸುಮಾರು ಹತ್ತು ಕಿ.ಮೀ ಯು.ಟಿ.ಖಾದರ್ ಕಾರಿನ ಹಿಂದೆ ಬಂದಿದ್ದಾರೆ. ಇದರಿಂದ ಅನುಮಾನ ವ್ಯಕ್ತಪಡಿಸಿದ ಮಾಜಿ ಸಚಿವರ ಬೆಂಗಾವಲು ವಾಹನದ ಪೊಲೀಸರು ಬೈಕ್‌ಗೆ ತಡೆ ಹಾಕಿದ್ದಾರೆ. ಆದರೆ ತಕ್ಷಣವೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕರ ಕಾವಲು ಪಡೆಯ ಮುಖ್ಯಸ್ಥ ಸುಧೀರ್, ದೇರಳಕಟ್ಟೆಯಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಏಂ 19 ಇಓ 6055 ನಂಬರ್ ಬೈಕಿನಲ್ಲಿ ಅನುಮಾನಾಸ್ಪದವಾಗಿ ಹಿಂಬಾಲಿಸುತ್ತಿದ್ದರು. ಇದನ್ನು ಅರಿತು ಬೈಕ್ ತಡೆಯಲು ಮುಂದಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Kshetra Samachara
23/12/2020 11:12 pm