ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಜಿಲ್ಲೆಯ ತೆಂಕ ಎರ್ಮಾಳ್ ಗ್ರಾಮದ ಪಂಚಾಯಿತಿ ಮಿನಿ ಸಮರ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ತೆಂಕ ಎರ್ಮಾಳ್ , ಗ್ರಾಮ ಪಂಚಾಯಿತಿ ತೆಂಕ ಒಂದನೇ ವಾರ್ಡ್ ನಲ್ಲಿ ಅಭಿವೃದ್ಧಿಯ ಕನಸು ಕಂಡ ಯುವನಾಯಕ ಪವನ್ ಆನಂದ್.

ಹೊಸ ರಾಜಕೀಯ ಯೋಚನೆ ಮತ್ತು ಯೋಜನೆಗಳನ್ನು ಹೊಂದಿದ್ದು, ರಾಜಕೀಯ ಅಖಾಡದಲ್ಲಿ ಮಿನುಗಲು ರೆಡಿಯಾಗಿದ್ದಾರೆ.

ಸಾಂಸ್ಕೃತಿಕ, ಕ್ರೀಡೆ ಹಾಗೂ ಸಾಮಾಜಿಕ ಕಳಕಳಿಯ ವ್ಯಕ್ತಿಗಳು ಇವರ ಜೊತೆಗೆ ಸೇರಿಕೊಂಡಿದ್ದು, ಹೊಸತನದ ಯೋಜನೆ- ಯೋಚನೆಯನ್ನು ಹೊತ್ತು ಸಾಗುತ್ತಿದ್ದಾರೆ. ರಾಜಕೀಯ ಅಂದರೆ ಅದೊಂದು ಸೇವೆ ಎನ್ನುವ ಮೂಲತತ್ವವನ್ನು ಒಳಗೊಂಡು ಹೊಸರೀತಿಯ ಯೋಜನೆಯನ್ನು ಅಳವಡಿಸಿಕೊಂಡು ಹೊರಹೊಮ್ಮುತ್ತಿದ್ದಾರೆ ಈ ಯುವನಾಯಕ.

ಕೇವಲ ಐದು ವರ್ಷ ಮಾತ್ರ ಆಡಳಿತ ಮಾಡಿ, ನಂತರ ನನ್ನ ವೃತ್ತಿಜೀವನಕ್ಕೆ ಮರಳುತ್ತೇನೆ. ಆದರೆ, ಐದು ವರ್ಷದಲ್ಲಿ ತನ್ನ ವಾರ್ಡಿನ ಅಭಿವೃದ್ಧಿಯನ್ನು ತಲೆಯಲ್ಲಿ ಇಟ್ಟುಕೊಂಡು ರಾಜಕೀಯ ಅಖಾಡಕ್ಕೆ ಧುಮುಕಿದ್ದಾರಂತೆ ಇವರು. 'ಅಭಿವೃದ್ಧಿಯೊಂದೇ ನನ್ನ ಮೂಲ ಮಂತ್ರ, ಹಣ ಮಾಡಲು ನನಗೆ ರಾಜಕೀಯ ಬೇಡ, ನನ್ನ ವೃತ್ತಿಜೀವನವೇ ಸಾಕು' ಎಂಬ ಖಡಕ್ ಮಾತುಗಾರಿಕೆಯಲ್ಲಿ ತನ್ನ ವಿಚಾರವನ್ನು ವ್ಯಕ್ತಪಡಿಸುವ ಭರವಸೆಯ ಯುವನಾಯಕನಿಗೆ ಮತದಾರರ ಪ್ರಶ್ನೆ ಇಲ್ಲಿದೆ ನೋಡಿ...

Edited By : Nagesh Gaonkar
Kshetra Samachara

Kshetra Samachara

21/12/2020 09:29 pm

Cinque Terre

18.9 K

Cinque Terre

1

ಸಂಬಂಧಿತ ಸುದ್ದಿ