ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಿಜೆಪಿಯಲ್ಲಿ ಯಾವುದೇ ತಿಕ್ಕಾಟ, ಗೊಂದಲ ಇಲ್ಲ:ಗೃಹ ಸಚಿವ

ಉಡುಪಿ: ಶಾಲೆಗಳನ್ನು ಓಪನ್ ಮಾಡುವಂತೆ ಪೋಷಕರಿಂದ ಒತ್ತಾಯ ಬರುತ್ತಿರುವ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಗೃಹ ಸಚಿವರು,ಕೊರೋನಾ ಸ್ಥಿತಿಗತಿಯನ್ನು ನೋಡಿಕೊಂಡು ಎಲ್ಲ ನಿರ್ಧಾರ ಆಗುತ್ತದೆ.ಮೇಲ್ಮನೆ ಸದಸ್ಯರು ಒತ್ತಡ ಹಾಕುವುದು ಸಹಜ.

ಕಾಲಕಾಲಕ್ಕೆ ಶಿಕ್ಷಣ ಸಚಿವರು ಎಲ್ಲಾ ವಿಭಾಗಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ.ಶಾಲೆಗಳು ಓಪನ್ ಆಗೋದಕ್ಕೆ ಪರ ಮತ್ತು ವಿರೋಧ ಅಭಿಪ್ರಾಯಗಳು ಇವೆ ಎಂದು ಹೇಳಿದರು.

ಸಂಪುಟ ವಿಸ್ತರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ,ಮಂತ್ರಿಗಳು ಹೈಕಮಾಂಡ್ ಜತೆ ಚರ್ಚೆ ನಡೆಸುತ್ತಿದ್ದಾರೆ ಎಂದರು.

ಸಿಎಂ ಯಡಿಯೂರಪ್ಪ- ಕುಮಾರಸ್ವಾಮಿ ಭೇಟಿ ವಿಚಾರವಾಗಿ ಹ್ಯಾಮ್ಲೆಟ್ ನಾಟಕದ ಉದಾಹರಣೆ ಕೊಟ್ಟಿರುವ ಎಚ್ ವಿಶ್ವನಾಥ್ ಬಗ್ಗೆ

ಉಡುಪಿಯಲ್ಲಿ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ ,ಹ್ಯಾಮ್ಲೆಟ್ ನಾಟಕ ನಾವು ಕೂಡ ಓದಿದ್ದೇವೆ. ಆ ಕತೆಗಳೆಲ್ಲ ನಮಗೂ ಗೊತ್ತು ರೀ.ಮುಖ್ಯಮಂತ್ರಿಗಳು ಯಾರನ್ನು ಭೇಟಿಯಾಗಬಹುದು, ಅವರ ನಡುವೆ ಏನು ಮಾತುಕತೆಯಾಗಿದೆ ಅನ್ನೋದನ್ನು ನಾವು ವ್ಯಾಖ್ಯಾನ ಮಾಡುವುದಕ್ಕೆ ಬರೋದಿಲ್ಲ.

ಬಿಜೆಪಿಯಲ್ಲಿ ಯಾವುದೇ ತಿಕ್ಕಾಟ ಗೊಂದಲ ಇಲ್ಲ.ಬಿಜೆಪಿ ರಾಷ್ಟ್ರೀಯ ಪಕ್ಷ ,ರಾಷ್ಟ್ರೀಯ ನಾಯಕರು, ಹೈಕಮಾಂಡ್ , ಪ್ರಧಾನಿಗಳು ಇದ್ದಾರೆ.ಚರ್ಚಿಸಿ ಅವರು ಮಾಡುವ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

03/12/2020 01:45 pm

Cinque Terre

14.64 K

Cinque Terre

0

ಸಂಬಂಧಿತ ಸುದ್ದಿ