ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಿಜೆಪಿ ಬಂದಾಗ ಸಮಾಜದ್ರೋಹಿ ಶಕ್ತಿಗಳಿಗೆ ಧೈರ್ಯ ಜಾಸ್ತಿ; ಯು.ಟಿ. ಖಾದರ್

ಮಂಗಳೂರು: ನಗರದಲ್ಲಿ ಉಗ್ರರ ಪರವಾದ ಗೋಡೆ ಬರಹ ಬರೆಯುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಇದನ್ನು ಯಾರೇ ಆದರೂ ಸಹಿಸಲು ಯಾವುದೇ ಕಾರಣಕ್ಕೂ ಸಾಧ್ಯ‌ ಇಲ್ಲ ಎಂದು ಮಾಜಿ ಸಚಿವ ಯು.ಟಿ‌.ಖಾದರ್ ಹೇಳಿದ್ದಾರೆ.

ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಷ್ಕರ್ಮಿಗಳ ಪತ್ತೆ ಕಾರ್ಯ ಬಿಜೆಪಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿ.ಇವರಿಗೆ ಬೆಂಬಲವಾಗಿರುವವರನ್ನು ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ. ಗುಪ್ತಚರ ಇಲಾಖೆ ಏನು ಮಾಡ್ತಿದೆ..? ಮತ್ತೆ ಮತ್ತೆ ಹೀಗ್ಯಾಕೆ ಆಗ್ತಿದೆ ಎಂದು ಪ್ರಶ್ನಿಸಿದ ಅವರು,ಬರೆದವರನ್ನು ಹಿಡಿದು ಬೇರೆ ದೇಶಕ್ಕೆ ಬಿಟ್ಟು ಬರಬೇಕು. ಅಂತಹವರಿಗೆ ನಮ್ಮ ಮಣ್ಣಿನಲ್ಲಿ ಇರಲು ಯಾವುದೇ ಹಕ್ಕಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತು ಕಾನೂನಿಗೆ ಹೆದರದ ಪರಿಸ್ಥಿತಿ ಇದೆ. ಗೋಡೆ ಬರಹ, ಇನ್ನಿತರ ವಿಚಾರಗಳು ಕಾಂಗ್ರೆಸ್ ಸರ್ಕಾರ ಇದ್ದಾಗ ಇರಲಿಲ್ಲ. ಆದ್ರೆ ಬಿಜೆಪಿ ಬಂದಾಗ ಸಮಾಜ ದ್ರೋಹಿಶಕ್ತಿಗಳಿಗೆ ಧೈರ್ಯ ಬರುತ್ತದೆ ಎಂದರು.‌

ಇದಕ್ಕೆ ಜಿಲ್ಲೆಯ ಎಂಪಿ, ಎಂಎಲ್ ಎಗಳು ಉತ್ತರ ಕೊಡಬೇಕು. ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತವೆ. ಒಂದು ವಾರದ ಒಳಗೆ ಈ ಆರೋಪಿಗಳ ಪತ್ತೆಯಾಗಬೇಕು. ಅದು ಬಿಟ್ಟು 15 ದಿನದ ಒಳಗೆ ಬಂಧನ ಆಗದೇ ಇದ್ರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೇವೆ. ಅವರು ಮಾನಸಿಕ ಅಸ್ವಸ್ಥ ಆಗಿರಲಿ, ಯಾರೇ ಆಗಿರಲಿ ಅರೆಸ್ಟ್ ‌ಮಾಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದಕ್ಕೆ ಜವಾಬ್ದಾರಿ ಅಲ್ವಾ..? ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಇವತ್ತು ಕೋಮಾ ಸ್ಥಿತಿಯಲ್ಲಿ ಇದೆ ಎಂದರು.

Edited By : Manjunath H D
Kshetra Samachara

Kshetra Samachara

29/11/2020 12:28 pm

Cinque Terre

19.53 K

Cinque Terre

35

ಸಂಬಂಧಿತ ಸುದ್ದಿ