ಉಡುಪಿ : ಕಾಂಗ್ರೆಸ್ ಆಡಳಿತ ಕಾಲ ನೆನಪಿಸಿಕೊಳ್ಳಿ. ಹಟ್ಟಿಯಲ್ಲಿ ಗೋವುಗಳನ್ನು ತಲವಾರು ತೋರಿಸಿ ಅಪಹರಿಸುತ್ತಿದ್ದರು. ಸಿದ್ಧರಾಮಯ್ಯನವರ ಸರ್ಕಾರ ಗೋಕಳ್ಳರಿಗೆ ರಕ್ಷಣೆ ನೀಡಿತು. ಗೋರಕ್ಷಕರಿಗೆ ರಕ್ಷಣೆ ನೀಡಲಿಲ್ಲ. 24 ಹಿಂದೂಗಳ ಹತ್ಯೆ ನಡೆಯಿತು. ಆಗ ಸಿದ್ಧರಾಮಯ್ಯನವರ ಕಣ್ಣಲ್ಲಿ ನೀರು ಬರಲಿಲ್ಲ. ಈಗ ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಹತ್ಯೆ ನಡೆದಿಲ್ಲ. ಕೋಮು ಸಂಘರ್ಷಗಳು ನಡೆದಿಲ್ಲ. ಡ್ರಗ್ಸ್, ಗಾಂಜಾ ಶಾಲಾ ಕಾಲೇಜುಗಳನ್ನು ವ್ಯಾಪಿಸಿತ್ತು. ಅದನ್ನು ಪತ್ತೆಹಚ್ಚಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಿದ್ದೇವೆ ಎಂದರು.
ಪಂಚಾಯತ್ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಈಗಾಗಲೇ 90% ಬೂತ್‍ಗಳಲ್ಲಿ ಪೇಜ್ ಪ್ರಮುಖ್, 80% ಬೂತ್‍ಗಳಲ್ಲಿ ಪಂಚಸೂತ್ರ ಅಳವಡಿಕೆ, 50% ಬೂತ್‍ಗಳಲ್ಲಿ ಕುಟುಂಬ ಮಿಲನ ಆಯೋಜಿಸಿದ್ದೇವೆ. ಪಂಚಾಯತ್ ಚುನಾವಣೆಗೆ ಸಕಲ ಸನ್ನದ್ಧವಾಗಿದ್ದೇವೆ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುಡುಗಿದ್ದಾರೆ.
Kshetra Samachara
27/11/2020 05:36 pm